

ಆಂಧ್ರದ ಅನಂತಪುರ ಜಿಲ್ಲೆಯ ಡಿಸಿ ವಿನೋದ ಕುಮಾರ ಅವರು ನಾಲ್ಕು ತಿಂಗಳ ಕ್ರಿಶ್ಟಿನ್ ಸಾಯಿರಾ ಪಾಲಕರಾದ ಸುಧಾಕರ ಹಾಗೂ ಸಿಂಧು ದಂಪತಿಗೆ ನೋಬೆಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ನೀಡಿ ಗೌರವಿಸಿರುವುದು.
ಬಳ್ಳಾರಿ: ನಾಲ್ಕು ತಿಂಗಳ ಮಗು ವಿವಿಧ ರೀತಿಯ 149 ಫ್ಲಾಶ್‌ಕಾರ್ಡ್ ಗುರುತಿಸುವ ಮೂಲಕ ನೋಬೆಲ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದೆ.
ತಾಲೂಕಿನ ಹಗರಿ ಗ್ರಾಮದ ರೈಲ್ವೆ ಉದ್ಯೋಗಿ ಸುಧಾಕರ ಹಾಗೂ ಸಿಂಧು ದಂಪತಿಯ ನಾಲ್ಕು ತಿಂಗಳ ಕ್ರಿಶ್ಟಿನ್ ಸಾಯಿರಾ ಈ ಸಾಧನೆ ಮಾಡಿದ್ದಾಳೆ. ಇವರು ಮೂಲತಃ ಆಂಧ್ರಪ್ರದೇಶದ ಗುಂತಕಲ್ ತಾಲೂಕಿನವರು. ಮಗು ಆರಂಭದಲ್ಲೇ ವಿವಿಧ ಚಿತ್ರಗಳನ್ನು ಗುರುತಿಸಿದ್ದನ್ನು ತಾಯಿ ಗಮನಿಸಿದ್ದಾರೆ.
ಬಳಿಕ ರಾಷ್ಟ್ರೀಯ ಧ್ವಜಗಳು, ಹಣ್ಣುಗಳು, ಪ್ರಾಣಿಗಳು, ಪಕ್ಷಿಗಳ ಚಿತ್ರಗಳನ್ನು ನೀಡಿ ಟ್ರೈನಿಂಗ್ ನೀಡಿದ್ದಾರೆ. ನೋಬೆಲ್ ವರ್ಲ್ಡ್ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸಾಧನೆ ಕಂಡು ದಂಪತಿ ಹಾಗೂ ಮಗುವನ್ನು ಕರೆಯಿಸಿ ಆಂಧ್ರದ ಅನಂತಪುರ ಜಿಲ್ಲೆಯ ಡಿಸಿ ವಿನೋದ ಕುಮಾರ ಅವರು ನೋಬೆಲ್ ವರ್ಲ್ಡ್ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಮಗಳ ಸಾಧನೆಗೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.