ಬಡವರಿಗೆ ಭೂಮಿ, ನಿವೇಶನ ಮಂಜೂರಾತಿಗಾಗಿ ಡಿ.7ರಂದು ಹೋರಾಟ: ಸಮಿತಿ ಸದಸ್ಯ ಗುಡಿಮನೆ ಕರಿಯಪ್ಪ ಒತ್ತಾಯ

04122020 Bellary Gudimane Kariyappa
Published on

ಬಳ್ಳಾರಿ: ಬಡವರಿಗೆ ಭೂಮಿ, ನಿವೇಶನ ತ್ವರಿತವಾಗಿ ಮಂಜೂರು ಮಾಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಗುಡಿಮನೆ ಕರಿಯಪ್ಪ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಡವರಿಗೆ ಭೂಮಿ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗದ ಸರ್ಕಾರ ತರಾತುರಿಯಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದು, ರೈತರ ಭೂಮಿ ಕಾರ್ಪೋರೇಟ್ ಕಂಪನಿಗಳ ಮತ್ತು ಉಳ್ಳವರ ಪಾಲಾಗುವಂತೆ ಮಾಡಲು ಹೊರಟಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸರ್ಕಾರ ಪುರಸ್ಕರಿಸಿಲ್ಲ. ಬಳ್ಳಾರಿ ಜಿಲ್ಲೆಯೊಂದರಲ್ಲೇ ಈವರೆಗೆ ಭೂಮಿ, ನಿವೇಶನ ಕೋರಿ 40 ಅರ್ಜಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಇಲ್ಲ ಎಂದರು.

ಡಿ.7ರಂದು ಬೆಂಗಳೂರಿನಲ್ಲಿ ಹೋರಾಟ ಮತ್ತು ಜನವರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ರೈತ ಮುಖಂಡರಾದ ಎರ‌್ರಿಸ್ವಾಮಿ, ಮರೆಯಪ್ಪ, ಎಚ್.ನಾರಾಯಣ ಸ್ವಾಮಿ, ಗಂಗಾಧರ ವಡಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net