ರಸಗೊಬ್ಬರ ಪೂರೈಕೆಗೆ ಒತ್ತಾಯ

110422 Ballari Annual Celebration of Atmaniirpur Agriculture and Ceremonies
ಬಳ್ಳಾರಿಯ ಪ್ರವಾಸಿ ಮಂದಿರದಲ್ಲಿ ಅತ್ಮನಿರ್ಭರ್ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆ ಸಮಾರಂಭ ಅಂಗವಾಗಿ ಆಗಮಿಸಿದ ರಾಜ್ಯಸಭಾ ಸದಸ್ಯ, ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿಗೆ ಸನ್ಮಾನಿಸಿದರು.
Published on

ಬಳ್ಳಾರಿ: ಜಿಲ್ಲಾದ್ಯಂತ ರೈತರಿಗೆ ಅಗತ್ಯವಾದ ರಸಗೊಬ್ಬರವನ್ನು ಸರಬರಾಜು ಮಾಡಲು ಕೇಂದ್ರ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ರೈತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ್‌ರೆಡ್ಡಿ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಅತ್ಮನಿರ್ಭರ್ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆ ಸಮಾರಂಭ ಅಂಗವಾಗಿ ಆಗಮಿಸಿದ್ದ ರಾಜ್ಯಸಭಾ ಸದಸ್ಯ, ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿಗೆ ಸೋಮವಾರ ಮನವಿ ಸಲ್ಲಿಸಿದರು. ಭತ್ತದ ಖರೀದಿ ಕೇಂದ್ರಗಳನ್ನು ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಕುರುಗೋಡು ತಾಲೂಕುಗಳಲ್ಲಿ ತೆರೆದು ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವ ಕುರಿತು ಸೇರಿದಂತೆ ರಸಗೊಬ್ಬರ ಹೆಚ್ಚಿಗೆ ಪೂರೈಸುವ ಬಗ್ಗೆ, ಬೆಳೆ ವಿಮೆ, ಚರ್ಚಿಸಲಾಯಿತು. ಇದಕ್ಕೆ ರಾಜ್ಯಾಧ್ಯಕ್ಷರು ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದರು. ಗ್ರಾಮಾಂತರ ಮಂಡಲ ಮೋರ್ಚಾದ ಅಧ್ಯಕ್ಷ ಬಿ.ಡಿ.ಹಳ್ಳಿ ಎನ್.ವನ್ನಾರೆಡ್ಡಿ, ಉಪಾಧ್ಯಕ್ಷರಾದ ಗೋಟರ್ ಮಲ್ಲಿಕಾರ್ಜುನ್‌ರೆಡ್ಡಿ, ವೀರಾಪುರ ಕೆ.ವೀರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಿಂಚೇರಿ ಎಂ.ಬಿ.ಸುನೀಲ್ ಕುಮಾರ್, ಸದಸ್ಯ ಸದಾಶಿವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net