ಫೆ. 8 ರಂದು ಗ್ರಾಮೀಣ ಬ್ಯಾಂಕ್‌ನ ಸುವರ್ಣ ಮಹೋತ್ಸವ

Published on

ಬಳ್ಳಾರಿ : ಇಲ್ಲಿನ ಕಮ್ಮ ಭವನದಲ್ಲಿ ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೌಕರರ ಒಕ್ಕೂಟದ 15ನೇ ತ್ರೈವಾರ್ಷಿಕ ಅಧಿವೇಶನ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸುವರ್ಣ ಮಹೋತ್ಸವವನ್ನು ಫೆ.8 ಮತ್ತು 9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಐಆರ್‌ಆರ್‌ಬಿಇಎ ಪ್ರಧಾನ ಕಾರ್ಯದರ್ಶಿ ಎಸ್.ವೆಂಕಟೇಶ್ವರರೆಡ್ಡಿ ಹೇಳಿದರು.

ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮಿಣ ಬ್ಯಾಂಕ್ ಆರಂಭಗೊಂಡು 50 ವರ್ಷಗಳು ಕಳೆದಿದೆ. ಒಟ್ಟಾರೆ ದೇಶದಲ್ಲಿ 43 ಗ್ರಾಮೀಣ ಬ್ಯಾಂಕ್‌ಗಳಲ್ಲಿ 40 ಕೋಟಿ ಗ್ರಾಹಕರಿದ್ದಾರೆ. ಸದ್ಯ ಗ್ರಾಮೀಣ ಬ್ಯಾಂಕ್‌ಗಳಲ್ಲಿ 25 ಸಾವಿರ ಹುದ್ದೆಗಳು ಖಾಲಿಯಿದ್ದು, 15 ಸಾವಿರ ಸಿಬ್ಬಂದಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಗ್ರಾಮೀಣ ಬ್ಯಾಂಕ್‌ನ್ನು ರಾಷ್ಟ್ರೀಯ ಬ್ಯಾಂಕ್ ಆಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯನೂರ್ತಿ ವಿ.ಗೋಪಾಲ ಗೌಡ ಉದ್ಘಾಟಿಸುವರು. ಎಐಆರ್‌ಆರ್‌ಬಿಇಎ ಅಧ್ಯಕ್ಷ ಸಿ.ರಾಜೀವನ್ ಅಧ್ಯಕ್ಷತೆ ವಹಿಸುವರು. ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಡಿ.ಸುರೇಂದ್ರನ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಜಿ.ಆರ್.ದಿಲ್ಲಿಬಾಬು, ಧಾರವಾಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಶ್ರೀಕಾಂತ ಎಂ ಬಂಡಿವಾಡ, ಅಖಿಲ ಭಾರತ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಿಶ್ರಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದೇಶದ ವಿವಿಧ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಳ್ಳವರು. ಬಳಿಕ ಮಹಿಳಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಪದಾಕಾರಿಗಳಾದ ಪ್ರಶಾಂತ ಚೌದರಿ, ಮೀನಾ, ಸಿ.ಪನ್ನರಾಜ್, ಕೆ.ಕೋಟೇಶ್ವರರಾವ, ಟಿ.ಜಿ.ವಿಠ್ಠಲ್, ಎಚ್.ನಾಗೂಷಣರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net