ರೈತರ ಹೋರಾಟಕ್ಕೆ ಬೆಂಬಲ: ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಅಧ್ಯಕ್ಷೆ ಅಪರ್ಣಾ ಹೇಳಿಕೆ

India Women's Cultural Organization State President Aparna
ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಅಧ್ಯಕ್ಷೆ ಅಪರ್ಣಾ.
Published on

ಬಳ್ಳಾರಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿರುವ ರೈತರಿಗೆ ಸಮಿತಿ ಬೆಂಬಲ ನೀಡಲಿದೆ. ಸರ್ಕಾರ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ರಾಜ್ಯ ಅಧ್ಯಕ್ಷೆ ಅಪರ್ಣಾ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೋರಾಟದ ಆರಂಭದಲ್ಲಿ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ನಡೆಸಿರುವುದು ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ. ಈಗಾಗಲೇ ಸರ್ಕಾರ ಕೆಲ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗಿದೆ. ಕೃಷಿ ಕ್ಷೇತ್ರವನ್ನೂ ಖಾಸಗೀಕರಣ ಮಾಡಿದರೆ ರೈತರು ಕಾರ್ಪೋರೇಟರ್‌ಗಳ ಕೈಗೊಂಬೆಗಳಾಗಬೇಕಾಗುತ್ತದೆ ಎಂದರು.

ಸಮಿತಿಯ ನಿಯೋಗ ದೆಹಲಿಗೆ ಭೇಟಿ ನೀಡಿ ಹೋರಾಟ ಕೈಗೊಂಡ ರೈತರಿಂದ ಮಾಹಿತಿ ಪಡೆದವು. ಮೂರು ಕೃಷಿ ಕಾಯ್ದೆಗಳ ಪರಿಣಾಮವನ್ನು ರೈತರು ಅರಿತಿದ್ದಾರೆ. ಎಪಿಎಂಸಿ ಕಾಯ್ದೆ ಅನುಷ್ಠಾನಕ್ಕೆ ಬಂದರೆ ಕ್ರಮೇಣವಾಗಿ ಮಂಡಿ ಪದ್ಧತಿ ಮಾಯವಾಗುತ್ತದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದು ರೈತರ ಅಳಲಾಗಿದೆ. ರೈತರ ಹೋರಾಟಕ್ಕೆ ಜಯ ಸಿಗುವವರೆಗೂ ಸಮಿತಿ ಬೆಂಬಲಿಸಲಿದೆ. ಅಲ್ಲದೆ ಈ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ಸಮಿತಿ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ, ಜಿಲ್ಲಾ ಅಧ್ಯಕ್ಷೆ ಶಾಂತ, ಕಾರ್ಯದರ್ಶಿ ಈಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net