ಸೌಲಭ್ಯಕ್ಕೆ ಆಗ್ರಹಿಸಿ, ಕುಟುಂಬಸ್ಥರು ಪ್ರತಿಭಟನೆ

Published on

ಬಳ್ಳಾರಿ : ಹೊರಗುತ್ತಿಗೆ ನೌಕರ ಕೆ. ಪ್ರಕಾಶ್ ಮೃತಪಟ್ಟು ಎರಡು ವರ್ಷ ಕಳೆದರೂ ಸೌಲಭ್ಯ ಒದಗಿಸಿಲ್ಲ ಎಂಬುದಾಗಿ ಆಗ್ರಹಿಸಿ, ಇಲ್ಲಿನ ಬಿಮ್ಸ್ ಆವರಣದಲ್ಲಿ ಕೆ.ಪ್ರಕಾಶ್ ಕುಟುಂಬಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

ಮೃತನ ತಾಯಿ ವರಲಕ್ಷ್ಮೀ ಮಾತನಾಡಿ, ಬಿಮ್ಸ್ ನಲ್ಲಿ ಕೆ.ಪ್ರಕಾಶ್ ಹೊರಗುತ್ತಿಗೆ ನೌಕರನಾಗಿ ಹತ್ತು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದಾನೆ. ಆದರೆ, ಬಿಮ್ಸ್ ನಿಂದ ಈವರೆಗೆ ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ನೀಡಿಲ್ಲ. ಕೂಡಲೇ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಮಾತನಾಡಿ, ಪ್ರಕಾಶ್ ಎಂಬ ನೌಕರ ಜೀವ್ ಟೆಕ್ ಏಜೆನ್ಸಿ ಮೂಲಕ ಬಿಮ್ಸ್ ನಲ್ಲಿ ಹುದ್ದೆಗೆ ಸೇರಿದ್ದರಿಂದ ಆ ಸಂಸ್ಥೆಯ ಸೌಲಭ್ಯ ಒದಗಿಸಬೇಕು. ಈಗಾಗಲೇ ಜೀವ್ ಟೆಕ್ ಏಜೆನ್ಸಿ ಗೆ ನೋಟಿಸ್ ನೀಡಲಾಗಿದೆ. ಪ್ರಕಾಶ್ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಧರಣಿ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net