

ಬಳ್ಳಾರಿ: ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಅದರಿಂದ ಸೈಬರ್ ಕಳ್ಳರು ಹಣ ಕೇಳಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಡೆಪ್ಯೂಟಿ ಕಮಿಷನರ್ ಬಳ್ಳಾರಿ ಎಂಬ ನಕಲಿ ಖಾತೆಯಿಂದ ಸೈಬರ್ ಕಳ್ಳರು ‘ಹೇಗಿದ್ದಿರಾ ?’ ಎಂದು ಆರೋಗ್ಯದ ಬಗ್ಗೆ ವಿಚಾರಿಸಿ ‘ಎಲ್ಲಿದ್ದರಾ ? ನಿಮ್ಮ ಬಳಿ ಪೋನ್ ಪೇ ಇದೆಯಾ ? ಹಣದ ಅವಶ್ಯಕತೆ ಇತ್ತು. ಬೆಳಗ್ಗೆ ಮರಳಿ ಕೊಡುತ್ತೇನೆ’ ಎಂಬ ಸಂದೇಶಗಳನ್ನು ಸಾರ್ವಜನಿಕರಿಗೆ ಸೇರಿದಂತೆ ವಿವಿಧ ಮುಖಂಡರ ಮೆಸೆಂಜರ್ ಬಾಕ್ಸ್‌ಗೆ ರವಾನಿಸಲಾಗಿದೆ.
ಬಳಿಕ ಅಲರ್ಟ ಆದ ಪವನ್‌ಕುಮಾರ್ ಮಾಲಪಾಟಿ ‘ನನ್ನ ಹೆಸರಲ್ಲಿ ವಂಚಕರು ನಕಲಿ ಖಾತೆ ಸೃಷ್ಟಿಸಿದ್ದು, ಸಿಕ್ಕಸಿಕ್ಕವರಿಗೆ ಹಣ ಕೇಳುತ್ತಿದ್ದಾರೆ. ಯಾರೂ ಹಣ ಕೊಡದಿರಿ. ಇಂತಹ ಸಂದೇಶಗಳಿಂದ ಎಚ್ಚರಿಕೆಯಿಂದ ಇರಿ’ ಎಂದು ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.