ಕಾಲಾವಕಾಶ ಹೆಚ್ಚಿಸಿ

Published on

ಬಳ್ಳಾರಿ ; ತಾಲೂಕು ಹಾಗೂ ಸಂಡೂರಿನ ಆದಿರು ತುಂಬಿದ ಪ್ರದೇಶದಿಂದ ಆನ್‌ಲೋಡ್ ಪಾಯಿಂಟ್‌ವರೆಗೆ ಲಾರಿಗಳ ಮೇಲೆ ಹೇರಿರುವ ಕಾಲಾವಕಾಶವನ್ನು ನಾಲ್ಕು ತಾಸು ಹೆಚ್ಚಿಸಬೇಕು ಎಂದು ಲಾರಿ ಅಸೋಸಿಯೇಷನ್ ಅಧ್ಯಕ್ಷ ವೆಂಕಟರಾವ್ ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಇದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಯುಕ್ತರಿಗೆ ಮನವಿ ಮಾಡಲಾಗಿದೆ. ಸಮಯದ ಅಭಾವದಿಂದ ಆದಿರು ತುಂಬಿದ ಲಾರಿಗಳು ವೇಗವಾಗಿ ಚಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅದಕ್ಕಾಗಿ ಸ್ಪೀಡ್ ಗವರ್ನರ್ ಅಳವಡಿಸಲು ಸೂಚಿಸಿದೆ ಎಂದರು.

ಬಳ್ಳಾರಿ ಮತ್ತು ಸಂಡೂರು ತಾಲೂಕಿನಲ್ಲಿ 7500 ಟಿಪ್ಪರ್ ಲಾರಿಗಳಿವೆ. ಗಣಿಗಾರಿಕೆ ಪ್ರದೇಶದಿಂದ ಸದ್ಯ ಎಂಟು ತಾಸು ಸಮಯವನ್ನು ಗರಿಷ್ಠ ನೂರು ಕಿ.ಮೀ. ವೇಗವಾಗಿ ಓಡಿಸಲು ಅನುಮತಿಯಿದೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಸಮಯ ಸಾಲುತ್ತಿಲ್ಲ. ಅದಕ್ಕಾಗಿ ಲಾರಿ ಚಾಲಕರು ಲಾರಿಗಳನ್ನು ವೇಗವಾಗಿ ಚಲಾಯಿಸಲಾಗುತ್ತಿದೆ. ಹೀಗಾಗಿ ಎಂಟು ತಾಸುನಿಂದ ಹನ್ನೇರೆಡು ತಾಸಿನವರೆಗೆ ಹೆಚ್ಚಿಸಬೇಕು. ಸಮಯ ಹೆಚ್ಚಿಸಿದರೆ ಅಪಘಾತಗಳ ಪ್ರಕರಣಗಳು ತಗ್ಗಲಿವೆ ಎಂದು ಹೇಳಿದರು.

ಪದಾಧಿಕಾರಿಗಳಾದ ಶೇಖರ್, ಮೆಹಬೂಬ್ ಬಾಷ್, ದಾದಾಪೀರ್, ಪಾಲಾಕ್ಷಿಗೌಡ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net