ಬಳ್ಳಾರಿ : ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬ ಅತಂಕದಿಂದ ಹೊರಬರಬೇಕು ಎಂದು ಡಿಡಿಪಿಐ ಬಿ.ಉಮಾದೇವಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಮತ್ತು ಪೆನ್ನುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು. ಯಾರು ಮೊಬೈಲ್ ಗೀಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಉತ್ತಮ ಅಭ್ಯಾಸದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಜೆ .ಟಿ.ಫೌಂಡೇಶನ್ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ ಹಂತವಾಗಿದೆ. ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದರು.
ಜಂಗಮರ ಹೊಸಳ್ಳಿ ಮಠದ ಶ್ರೀಶಂಭುಲಿಂಗ ತಾತ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಅಂದರೆ ಯಾರು ಸಹ ಮನನೊಂದುಕೊಳ್ಳದೆ ಮುಂದೆ ಸಾಗಬೇಕು. ಜೀವನದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ ಎಂದು ತಿಳಿಸಿದರು.