ರಥೋತ್ಸವಕ್ಕೆ ಎಲ್ಲರೂ ಸಹಕರಿಸಿ

Published on

ಬಳ್ಳಾರಿ : ಪಟ್ಟಣದಲ್ಲಿ ಮಾ.14 ರಂದು ಜರುಗುವ ದೊಡ್ಡಬಸವೇಶ್ವರ ಮಹಾರಥೋತ್ಸವ ಸುಗಮವಾಗಿ ಜರುಗಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಥೋತ್ಸವ ಶಾಂತಿ ಸಭೆಯಲ್ಲಿ ಮಾತನಾಡಿದರು, ಎಲ್ಲರೂ ಸೇರಿ ಶಾಂತಿ

ಸೌಹಾರ್ದಯುತವಾಗಿ ರಥೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ರಥೋತ್ಸವಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು

ಮನವಿ ಮಾಡಲಾಗಿದೆ. ರಥ ಬೀದಿಯಲ್ಲಿ ಅಂಗಡಿಮುಂಗಟ್ಟುಗಳನ್ನು ಹಾಕಲು ಅವಕಾಶ ಇರುವುದಿಲ್ಲ. ನಾವು ಸೂಚಿಸಿದ ಸ್ಥಳದಲ್ಲಿ

ವರ್ತಕರು ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ

ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಪರಾಧ ಕೃತ್ಯಗಳನ್ನು ಮೊದಲೇ ಪತ್ತೆಹಚ್ಚಲು 12 ಜನ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಆಯಕಟ್ಟಿನ ಸ್ಥಳದಲ್ಲಿ 20 ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗಿದೆ. ರಥದ ಸುತ್ತ ರೋಪ್ ಸಹಾಯದಿಂದ ಜನರನ್ನು ನಿಯಂತ್ರಿಸಸಲಾಗುವುದು. ಸಾರ್ವಜನಿಕರು ರಥೋತ್ಸವಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು

ಪಿಎಸ್‌ಐ. ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ರಥೋತ್ಸದ ದಿನ ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪಟ್ಟಣದ ಬಳ್ಳಾರಿ, ಕಂಪ್ಲಿ, ಗೆಣಿಕೆಹಾಳು, ಬಾದನಹಟ್ಟಿ ಮತ್ತು ಮುಷ್ಟಗಟ್ಟೆ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಥೋತ್ಸವದ ಸಂದರ್ಭದಲ್ಲಿ ಕೆರೆಕೆರೆ, ಸೋಮಲಾಪುರ ಮತ್ತು ಮುಷ್ಟಗಟ್ಟೆ ಗ್ರಾಮದವರು ಕುಂಭ ಮತ್ತು ದೂಳುಗಾಯಿ ಅರ್ಪಿಸುವ

ಕಾರ್ಯ ಸುಗಮವಾಗಿ ಜರುಗಲು ಪೊಲೀಸರ ವಿಶೇಷ ತಂಡ ರಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿಯುತವಾಗಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಬೇಕು. ಮಾರಕಾಸ್ತಗಳನ್ನು ಹಿಡಿದು ಕುಣಿಯುವುದು ಮತ್ತು ಮದ್ಯಪಾನಮಾಡಿ ಜನರಿಗೆ ತೊಂದರೆ ಕೊಡುವುದು ಕಂಡುಬಂದರೆ ಅವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net