ಬಳ್ಳಾರಿ ; ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗಣತಿ ಸಮೀಕ್ಷೆ ನಡೆಯುತ್ತಿದ್ದು, ಆಯಾ ಜಾತಿಗಳ ಹೆಸರನ್ನೆ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ವೈ.ಶಿವಕುಮಾರ ಹೇಳಿದರು.
ಜಿಲ್ಲೆಯ ಅಲೆಮಾರಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಸಿಂದೋಳ್ಳು, ಬೇಡ/ಬುಡ್ಗ, ಜಂಗಮ, ದಕ್ಕಲಿಗ, ಹಂದಿಜೋಗಿಸ್, ಶಿಳ್ಳೇಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡು ಸಿದ್ದ ಜಾತಿ ಎಂದು ಬರೆಸಬೇಕು. ಅಲ್ಲದೆ, ಸಮುದಾಯದ ಯುವಕರು ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಾತಿಗಣತಿ ಕಾರ್ಯ ಪೂರ್ಣಗೊಳ್ಳುವವರೆಗೂ ಜಾತ್ರೆಗಳು ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ತೊಡಗಬಾರದು ಎಂದು ಮನವಿ ಮಾಡಿದರು. ದತ್ತಾಂಶ ಸಂಗ್ರಹ ಮಾಡುವುದರಿಂದ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿರುವ ಈ ಸಮುದಾಯಗಳು ಜನಾಂಗದ ಅಂಕಿ ಜನಸಂಖ್ಯೆಗಳ ಎಷ್ಟು ಇದೆ ಎಂಬ ಮಾಹಿತಿ ಸರ್ಕಾರದ ಗಮನಕ್ಕೆ ಇರುತ್ತದೆ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ವಿವರಿಸಿದರು.
ಪದಾಧಿಕಾರಿಗಳಾದ ಡಿ.ರಂಗಯ್ಯ, ರಾಮಾಂಜನಿ, ಹುಚ್ಚಪ್ಪ, ಹನುಮಂತಪ್ಪ, ಗಾದಿಲಿಂಗ, ಹುಲುಗಣ್ಣ ಇದ್ದರು.