ಬಳ್ಳಾರಿ : ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿ ಹಿಂದು ಬಿಟ್ಟು ವೀರಶೈವ, ಲಿಂಗಾಯತ ಎಂಬುದಾಗಿ ನಮೂದಿಸಿದರೆ ಅಪ್ರಸುತವಾಗಲಿದೆ ಎಂದು ವೀರಶೈವ ಸಂಘ ಮಾಜಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆದ್ದರಿಂದ, ಸಮುದಾಯದ ಎಲ್ಲರೂ ಧರ್ಮ ಕಾಲಂ ನಲ್ಲಿ ಹಿಂದು, ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ ಹಾಗೂ ಉಪಜಾತಿ ಕಾಲಂ ನಲ್ಲಿ ಜಾತಿ ಸೇರಿಸಿಕೊಳ್ಳಿ ಎಂದು ಸಮುದಾಯಕ್ಕೆ ಕರೆ ನೀಡಿದರು.
ಧರ್ಮದ ಕಾಲಂ ನಲ್ಲಿಯೇ ಲಿಂಗಾಯತ ಅಥವಾ ವೀರಶೈವ ಎಂಬುದಾಗಿ ನಮೂದಿಸುವುದರಿಂದ ಇತರೆ ಕಾಲಂ ಸೇರಿ ಆಟಕ್ಕೆ ಉಂಟು ಲೆಕ್ಕಕ್ಕೆವಿಲ್ಲ, ಗಾಳಿಯಲ್ಲಿ ಗುಂಡು ಹಾರಿಸದಂತೆಯಾಗಲಿದೆ ಎಂದು ವಿವರಿಸಿದರು.
ಹುಬ್ಬಳಿಯ ಏಕತಾ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ ಭಾಷಣದ ಕೊನೆಯಲ್ಲಿ ಧರ್ಮದ ಕಾಲಂ ನಲ್ಲಿ ಯಾವ ಜಾತಿಯಾದರೂ ಬರೆಸಿಕೊಳ್ಳಿ ಎಂಬುದಾಗಿ ಹೇಳಿಕೆ ನೀಡಿ ಸಮುದಾಯದಲ್ಲಿ ಗೊಂದಲ ಮೂಡಿಸಿದ್ದಾರೆ. ಅವರ ಹೇಳಿಕೆ ಬೇಸರ ತರಿಸಿದೆ ಎಂದರು.
ಧರ್ಮವನ್ನು ನಿರ್ಧರಿಸುವುದು ಕೇಂದ್ರ ಸರ್ಕಾರ ಹೊರತು ರಾಜ್ಯ ಸರ್ಕಾರವಲ್ಲ. ಆದ್ದರಿಂದ, ಕೇಂದ್ರ ಸರ್ಕಾರ ನಡೆಸುವ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿಯೇ ವೀರಶೈವ ಲಿಂಗಾಯತ ಎಂಬುದಾಗಿ ಅಧಿಕೃತ ಬರುವವರೆಗೆ ಹಿಂದು ಎಂದು ಬರೆಸಬೇಕು ಎಂದರು. ಯಾರು ಕೂಡ ಸಮೀಕ್ಷೆಯಿಂದ ದೂರ ಉಳಿಯದೆ ಎಲ್ಲರೂ ಪಾಲ್ಗೂಳಬೇಕು ಎಂದು ಸಮುದಾಯಕ್ಕೆ ಕರೆ ನೀಡಿದರು.
ಸಮುದಾಯದ ಮುಖಂಡರಾದ ದರೂರು ಪುರುಷೋತ್ತಮಗೌಡ, ಗೋನಾಳ್ ರಾಜಶೇಖರಗೌಡ, ಪಲ್ಲೇದ್ ಪಂಪಾಪತಿ, ಎಸ್. ಸೋಮಲಿಂಗನಗೌಡ, ತಿಪ್ಪೇರುದ್ರಪ್ಪ , ನಾಗರಾಜ್ ಇದ್ದರು.