ಬಳ್ಳಾರಿ: ಬಳ್ಳಾರಿ ಮತ್ತು ಕುರುಗೋಡು ತಾಲೂಕು ಕೃಷಿಕ ಸಮಾಜದ ತಾಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಚುನಾವಣೆ ಘೋಷಣೆಯಾಗಿದ್ದು, ಡಿ.೧೫ರಂದು ಮತದಾನ ನಡೆಯಲಿದೆ ಎಂದು ಚುನಾವಣಾಕಾರಿ ಹಾಗೂ ಬಳ್ಳಾರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ದಯಾನಂದ ಎಂ., ತಿಳಿಸಿದ್ದಾರೆ.
ನ.೩೦ ರಿಂದ ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬಳ್ಳಾರಿ ಮತ್ತು ಕುರುಗೋಡು ರೈತ ಸಂಪರ್ಕ ಕೇಂದ್ರಗಳಲ್ಲಿ ನಾಮಪತ್ರ ವಿತರಣೆ ಮಾಡಲಾಗುವುದು. ಪ್ರತಿ ತಾಲೂಕು ಕಾರ್ಯಕಾರಿ ಸಮಿತಿ ೧೫ ಸದಸ್ಯ ಸ್ಥಾನಗಳಿದ್ದು, ಕೃಷಿಕ ಸಮಾಜದ ಅಜೀವ ಸದಸ್ಯರು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ೭ ದಿನಗಳ ಮುಂಚಿತವಾಗಿ ರೂ.೨೫೦ ಠೇವಣೆಯ ಮೂಲ ರಶೀದಿ ಹಾಗೂ ಪಹಣಿಯೊಂದಿಗೆ ಚುನಾವಣಾಧಿಕಾರಿಗೆ ಅರ್ಜಿ ಮೂಲಕ ನಾಮಪತ್ರ ಸಲ್ಲಿಸಬೇಕು.
ನಾಮಪತ್ರ ಸಲ್ಲಿಸಲು ಡಿಸೆಂಬರ್-೦೬ ರ ಬೆಳಗ್ಗೆ ೧೧ ರಿಂದ ಸಂಜೆ ೩ ರವರೆಗೆ ಸಮಯ ನಿಗದಿಪಡಿಸಲಾಗಿದೆ. ಡಿಸೆಂಬರ್-೧೫ ರಂದು ಬೆಳಗ್ಗೆ ೮ ರಿಂದ ಮ‘್ಯಾಹ್ನ ೩ ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದೇ ಮತ ಏಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು.
ಮಾಹಿತಿಗೆ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ದಯಾನಂದ ಎಂ., ಹಾಗೂ ಅವರ ಮೊ.೮೨೭೭೯೩೪೨೯೪ ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---