ಭೂ ದಾಖಲೆಗಳ ಇ-ಖಜಾನೆ ಚಾಲನೆ

Published on

ಬಳ್ಳಾರಿ : ಇಲ್ಲಿನ ಹೊಸ ಡಿಸಿ ಕಚೇರಿಯ ಸಭಾಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಭೂ ಸುರಕ್ಷಾ ಕಾರ್ಯಕ್ರಮದ ಅಡಿ ಆರಂಭಿಸಿರುವ ನೂತನ ಭೂ ದಾಖಲೆಗಳ ಇ-ಖಜಾನೆಯನ್ನು ಶಾಸಕ ನಾರಾಭರತರೆಡ್ಡಿ ಉದ್ಘಾಟಿಸಿದರು.

ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಟಲೀಕರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ. ಹಳೆಯ ದುಃಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿಟಲೀಕರಣ ದಾಖಲೆಗಳಾಗಿ ಪರಿವರ್ತಿಸುವುದು, ರೆಕಾರ್ಡ್ ರೂಂಗಳಿಂದ ದಾಖಲೆ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ, ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವು- ತಿದ್ದುಪಡಿ ನಿಯಂತ್ರಣ ಮಾಡುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಇನ್ನು ಮುಂದೆ ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ತಹಸೀಲ್ದಾರ್ ಗುರುರಾಜ್ ಮಾಹಿತಿ ನೀಡಿದರು.

ಜೀನ್ಸ್ ಅಪೆರಲ್ ಪಾರ್ಕ್‌ಗೆ ಶಾಸಕ ಹರ್ಷ : ಜೀನ್ಸ್ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿ ಹಲವು ಬಾರಿ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಮನವಿಗೆ ಸ್ಪಂದಿಸಿ ಜಿಲ್ಲೆಗೆ ವರದಾನ ಆಗಬಹುದಾದ ಬಹುದೊಡ್ಡ ಕೆಲಸಕ್ಕೆ ಚಾಲನೆ ನೀಡಲು ಮುಂದಾಗಿರುವುದು ಸಂತಸ ತಂದಿದೆ. ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆಯಾದಲ್ಲಿ ಇನ್ನೂ ಹತ್ತಾರು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ನಾರಾಭರತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net