ಮೌಲ್ಯಾಧಾರಿತ ಜೀವನಕ್ಕೆ ನಾಟಕ ಸಹಾಯಕ

Published on

ಬಳ್ಳಾರಿ : ಮೌಲ್ಯಧಾರಿತ ಜೀವನವನ್ನು ಕಟ್ಟಿ ಕೊಡುವಲ್ಲಿ ನಾಟಕ ಸಹಾಯವಾಗುತ್ತದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾವಿದರ ಹಿತದೃಷ್ಟಿಯಿಂದ ಮತ್ತು ಕಲಾವಿದರಿಗೆ ಬೇಡಿಕೆಗಳನ್ನ ನೆರವೇರಿಸುವ ನಿಟ್ಟಿನಲ್ಲಿ ಜಿಲ್ಲಾ ಕಲಾವಿದರ ಸಂಘ ಸ್ಥಾಪಿಸಲಾಗಿದೆ. ಈ ಸಂಘದ ಕಛೇರಿಯನ್ನು ಇಲ್ಲಿನ ಸಾಂಸ್ಕೃತಿಕ ಸಮುಚ್ಚಯ ಅವರಣದಲ್ಲಿ ನೀಡಲು ಸಹಾಯಕ ನಿರ್ದೇಶಕರಿಗೆ ಸೂಚಿಸುವೆ. ಪ್ರತಿ ವರ್ಷ ಹೆಸರಾಂತ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಿ ಎಂದರು.

ಸಿಎ ಸಿರಿಗೇರಿ ಪನ್ನರಾಜ್ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಾಧ್ಯವಾಗುತ್ತದೆ. ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕೆಲವರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದರು.

ಮೇಯರ್ ‌ಮುಲ್ಲಂಗಿ ನಂದೀಶ್ ಮಾತನಾಡಿ, ಹಿರಿಯ ಕಲಾವಿದರನ್ನು ನೆನೆಯಬೇಕು. ಅವರ ನಾಟಕಗಳನ್ನು ನೋಡಿ ಹಲವಾರು ಯುವ ಕಲಾವಿದರು ರಂಗಭೂಮಿಗೆ ಬರುತ್ತಿರುವುದು ಸಂತಸದ ವಿಷಯ ಎಂದರು.

ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ‌ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net