ಡಾ. ನೇಕಾರ ವಿರುಪಾಕ್ಷಪ್ಪ ಗೆ ರಾಜ್ಯೋತ್ಸವ ಪ್ರಶಸ್ತಿ

Published on

ಬಳ್ಳಾರಿ : ಇಲ್ಲಿನ ಹುಸೇನ್ ನಗರ ನಿವಾಸಿಯಾದ ಡಾ.ನೇಕಾರ ವಿರುಪಾಕ್ಷಪ್ಪ ಅವರಿಗೆ ಸಹಕಾರ ಕ್ಷೇತ್ರದಲ್ಲಿ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನೇಕಾರ ತಿಪ್ಪಯ್ಯ ಹಾಗೂ ನೇಕಾರ ತಿಪ್ಪಮ್ಮ ದಂಪತಿಯ ಮಗನಾದ ನೇಕಾರ ಡಾ. ವಿರುಪಾಕ್ಷಪ್ಪ ಅವರು 1952ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಇವರು ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆಯ ಮಾಡಿದ್ದಾರೆ. ಕಳೆದ 33 ವರ್ಷಗಳಿಂದ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.

ಸೇವೆ ಸಲ್ಲಿಸಿದ ವಿವರ : 1991 ರಲ್ಲಿ ಜಿಲ್ಲಾ ಕರ್ನಾಟಕ ಕೈಮಗ್ಗ ಸಹಕಾರ ಸಂಘದ ಅಧ್ಯಕ್ಷರಾಗಿ ಏಕಗ್ರೀಯವಾಗಿ ಆಯ್ಕೆಯಾದರು. ಅಲ್ಲದೆ, 1991 ರಿಂದ 98ರ ವರೆಗೆ ಜಿಲ್ಲಾ ಕೈಮಗ್ಗ ನೇಕಾರರ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 1993ರಲ್ಲಿ ಬಳ್ಳಾರಿ ಅರ್ಬನ್ ಕೋ - ಅಪರೇಟಿವ್ ಬ್ಯಾಂಕ್, 2000 ರಲ್ಲಿ ನೇಕಾರ ಭವನ ಹಾಗೂ ಜಿಲ್ಲಾ ಮಾರಾಟ ಮಾರ್ಕೆಟಿಂಗ್ ಸೊಸೈಟಿ, 2002 - 05ರವರೆಗೆ ಆಲ್ ಇಂಡಿಯಾ ಫ್ಯಾಬ್ರಿಕ್ಸ್ ಮಾರ್ಕೆಟಿಂಗ್ ಕೋ ಅಪರೇಟಿವ್ ಸೊಸೈಟಿಗಳಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ಜಿಲ್ಲಾ ಕೈಮಗ್ಗ ಸಹಕಾರ ಸಂಘದ ಮುಖ್ಯ ಪ್ರಚಾರಕರು ಕೂಡ ಆಗಿದ್ದರು.

ಪ್ರಶಸ್ತಿ ಗಳು : 2024 ರಲ್ಲಿ ಜಿಲ್ಲಾ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಯುಗಾದಿ ಪ್ರಶಸ್ತಿ ಹಾಗೂ ತುಂಗಾ ಗಂಗಾ ಸಂಸ್ಕ್ರತ ಕಲಾ ಟ್ರಸ್ಟ್‌ದಿಂದ ಜಾತೀಯ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ತ್ರಿಪುರ ಗರ್ವನರ್ ಎನ್. ಇಂದ್ರಾಸೇನಾರೆಡ್ಡಿ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ಕೋಟ್..... ಈ ಪ್ರಶಸ್ತಿಯಿಂದ ಜನ್ಮ ಸಾರ್ಥಕವಾಗಿದೆ. ಹಲವು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ದುಡಿದವರನ್ನು ಸರ್ಕಾರ ಗುರುತಿಸಿದೆ. ಈ ಪ್ರಶಸ್ತಿಯಿಂದ ಮತ್ತೋಷ್ಟು ಜವಾಬ್ದಾರಿ ಹೆಚ್ಚಿದೆ

- ನೇಕಾರ ವಿರುಪಾಕ್ಷಪ್ಪ, ರಾಜ್ಯೋತ್ಸವ ಪ್ರಶಸ್ತಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net