ಬಳ್ಳಾರಿ : ವರನಟ ಡಾ.ರಾಜ್ ಕುಮಾರ್ ಅವರು ಕನ್ನಡ ನಾಡು-ನುಡಿ, ಭಾಷಾಭಿಮಾನ ರಾಷ್ಟ ಮಟ್ಟದಲ್ಲಿ ಬೆಳೆಸಲು ಕೊಡುಗೆ ಅಪಾರ ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ಉದ್ಯಾನವನದಲ್ಲಿ ಡಾ.ರಾಜ್‌ಕುಮಾರ್ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪುತ್ಥಳಿಗೆ ಮಾರ್ಲಾಪಣೆಗೊಳಿಸಿ ಮಾತನಾಡಿದರು. ತಮ್ಮದೇ ಆದ ನಟನ ಶೈಲಿಯಲ್ಲಿ ಬೆಳ್ಳಿ ಪರದೆ ಮೇಲೆ ಒಲವು ಮೂಡಿಸಿದವರು.
ಡಾ.ರಾಜ್ ಕುಮಾರ್ ಅವರ ಎಲ್ಲ ಸಿನಿ ಚಿತ್ರಗಳು ಜೀವನದ ಆಯಾಮಗಳನ್ನು ಪ್ರಸ್ತುತಪಡಿಸುತ್ತಿದ್ದವು. ಬಾಲ್ಯದಲ್ಲಿ ನಾವೆಲ್ಲರೂ ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದಿದ್ದೇವೆ ಎಂದು ಸ್ಮರಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಆದೇಶಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.