ಬಳ್ಳಾರಿ : ಉಪಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್ ಅಯ್ಯರ್ ಅವರನ್ನು ಭಾರತೀಯ ಚುನಾವಣಾ ಆಯೋಗವು ನೇಮಿಸಿದೆ. ಡಾ.ದಿವ್ಯಾ ಎಸ್ ಅಯ್ಯರ್ ಅವರು ಸಂಡೂರಿನ ಹೊಸಪೇಟೆ ರಸ್ತೆಯ ಸರ್ಕ್ಯೂಟ್ ಹೌಸ್‌ನ ಕೊಠಡಿ ಸಂಖ್ಯೆ 1 ರಲ್ಲಿ ವಾಸ್ತವ್ಯ ಮಾಡುವರು. ಸಾರ್ವಜನಿಕರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷದ ಸದಸ್ಯರು ಯಾವುದೇ ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4 ರಿಂದ 5 ರವರೆಗೆ ನಿಗದಿತ ಸ್ಥಳ ಮತ್ತು ಸಮಯದಲ್ಲಿ ಸಾಮಾನ್ಯ ವೀಕ್ಷಕರನ್ನು ಭೇಟಿ ಮಾಡಬಹುದು ಅಥವಾ ಮೊ.9141142756 ಗೆ ಸಂಪರ್ಕಿಸಬಹುದು ಎಂದು ಉಪಚುನಾವಣೆಯ ಚುನಾವಣಾಧಿಕಾರಿ ಎಚ್.ಡಿ. ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.