ಡಾ.ಅಂಬೇಡ್ಕರ್ ಭಾರತ ಕಂಡ ಮಹಾನ್ ಮಾನವತಾವಾದಿ: ವಿಎಸ್‌ಕೆ ವಿವಿ ಕುಲಪತಿ ಸಿದ್ದು ಅಲಗೂರು ಅಭಿಪ್ರಾಯ

06122021 Bellari vv Ambedakar aniversary
Published on

ಬಳ್ಳಾರಿ: ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಾವಿಣ್ಯತೆ ಪಡೆದಿದ್ದ ಡಾ.ಅಂಬೇಡ್ಕರ್ ಭಾರತ ಕಂಡ ಮಹಾನ್ ಮಾನವತಾವಾದಿ ಎಂದು ವಿಎಸ್‌ಕೆ ವಿವಿ ಕುಲಪತಿ ಸಿದ್ದು ಪಿ.ಅಲಗೂರು ಅಭಿಪ್ರಾಯಪಟ್ಟರು.

ನಗರದ ವಿಎಸ್‌ಕೆ ವಿವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬಾ ಸಾಹೇಬರು ಸಮಾಜದ ಎಲ್ಲ ಋಣಗಳನ್ನು ತೀರಿಸಿ ಮಹಾ ಪರಿನಿರ್ವಾಣ ಹೊಂದಿದ್ದಾರೆ. ಅವರ ಆಶಯ ದಲಿತರ ಏಳಿಗೆ ಮಾತ್ರವಲ್ಲದೆ ಎಲ್ಲ ವರ್ಗಗಳಲ್ಲಿನ ದುರ್ಬಲರ ಅಭಿವೃದ್ಧಿ ಬಯಸಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಜಾತ್ಯತೀತ ಮತ್ತು ಸಮಾಜವಾದಿ ಹಾಗೂ ರಾಷ್ಟ್ರೀಯತೆಯ ಚಿಂತನೆಗಳ ಕುರಿತು ಅಧ್ಯಯನವಾಗಬೇಕಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಕಾರ್ಯಪ್ರವೃತ್ತರಾಗಬೇಕು ಎಂದರು. ಕುಲಸಚಿವ ಶಶಿಕಾಂತ್ ಎಸ್.ಉಡಿಕೇರಿ, ಹಣಕಾಸು ಅಧಿಕಾರಿ ಡಾ.ಕೆ.ಸಿ.ಪ್ರಶಾಂತ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net