ನಾಯಿ ಕಡಿತಕ್ಕೆ ನಿರ್ಲಕ್ಷೃ ವಹಿಸದಿರಿ

Published on

ಬಳ್ಳಾರಿ : ಸಾಮಾನ್ಯವಾಗಿ ಸಾಕಿದ ನಾಯಿಗಳು ಕಚ್ಚಿದರೆ, ಉಗುರಿನಿಂದ ಪರಚಿದರೆ ನಿರ್ಲಕ್ಷೃ ವಹಿಸದೇ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಧಿಕಾರಿ ಡಾ.ವಿ.ಕೆ.ಮರಿಯಂಬಿ ಹೇಳಿದರು.

ನಗರದ ಮುಂಡ್ರಿಗಿ ಬಡಾವಣೆಯಲ್ಲಿ ನಾಯಿ ಕಡಿತ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಂಕುವುಳ್ಳ ನಾಯಿ ಕಡಿತದಿಂದ ಮಾರಣಾಂತಿಕ ರೇಬೀಸ್ ಕಾಯಿಲೆಯನ್ನು ಹರಡುವುದನ್ನು ತಡೆಗಟ್ಟಬಹುದಾಗಿದ್ದು, ವೈದ್ಯರ ಸಲಹೆಯಂತೆ ರೇಬಿಸ್ ಚುಚ್ಚುಮದ್ದನ್ನು ಮೊದಲ ದಿನ, 3ನೇ ದಿನ, 7ನೇ ದಿನ, 14ನೇ ದಿನ, 28 ದಿನ ತಪ್ಪದೇ ಲಸಿಕೆ ಪಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net