ನಕಲಿ ವೈದ್ಯರ ಚಿಕಿತ್ಸೆಗೆ ಮೋಸ ಹೋಗಬೇಡಿ

Published on

ಬಳ್ಳಾರಿ : ಮಕ್ಕಳಾಗಿಲ್ಲದ ಕಾರಣ ತಜ್ಞವೈದ್ಯರಿಂದ ತಿಳಿದುಕೊಳ್ಳದೇ ಅಥವಾ ಚಿಕಿತ್ಸೆ ಪಡೆಯದೆ ಗಾಳಿವದಂತಿಗಳಿಗೆ ಮಾರುಹೋಗಿ ದಂಪತಿ ನಕಲಿ ವೈದ್ಯರ ಬಳಿ ಅನಗತ್ಯವಾಗಿ ಮೋಸ ಹೋಗಬೇಡಿ ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.

ನಗರದಲ್ಲಿ ಅನಧೀಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‌ಗಳಿಗೆ ವೈದ್ಯರ ಭೇಟಿ ತಂಡದೊಂದಿಗೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದರು. ಇಲ್ಲಿ ಪಿಂಜಾರ ಕಾಲನಿಯಲ್ಲಿ ಯಾವುದೆ ವೈದ್ಯಕೀಯ ಪದವಿ ಪಡೆಯದೇ ಮತ್ತು ಅಧಿಕೃತ ವಿದ್ಯಾಭ್ಯಾಸ ಮಾಡದೇ ಮಕ್ಕಳಾಗದ ದಂಪತಿಗೆ ಚಿಕಿತ್ಸೆ ಪಡೆದರೆ ಮಕ್ಕಳಾಗುವುದು ಎಂದು ಸುಳ್ಳು ಭರವಸೆ ಮೂಲಕ ಚಿಕಿತ್ಸೆ ನೀಡುತ್ತಿದ್ದ ಸಿ.ಶ್ರೀಧರ್ ಹಾಲಹರವಿ ಕ್ಲಿನಿಕ್‌ನ್ನು ಸೀಜ್ ಮಾಡಲಾಗಿದ್ದು ಪ್ರಕರಣ ದಾಖಲಿಸಿ ಕ್ರಮವಹಿಸಲಾಗುತ್ತಿದೆ ಎಂದರು. ಶ್ರೀಧರ ಫಲಕ ಇಲ್ಲದ ಮನೆಯಲ್ಲಿ ಕ್ಲಿನಿಕ್ ತೆರೆದು 20-30 ಮಹಿಳೆಯರನ್ನು ಏಕಕಾಲಕ್ಕೆ ಕ್ರೋಢಿಸಿ ಯಾವುದೇ ರಸೀದಿಯಿಲ್ಲದೆ ಹಣ ಪಡೆಯುವ ಮೂಲಕ ಆಲೋಪಥಿಕ್ ಔಷಧಿಗಳು, ಹಾರ್ಮೋನ್ ಇಂಜಕ್ಷನ್‌ಗಳನ್ನು ಚಿಕಿತ್ಸೆ ರೂಪದಲ್ಲಿ ನೀಡುತ್ತಿರುವುದು ಕಂಡು ಬಂದಿರುತ್ತದೆ. ವೈದ್ಯರು ಹಾಗೂ ತಜ್ಞವೈದ್ಯರು ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಿದ್ದು, ಅಡ್ಡ ಪರಿಣಾಮ ಸಹ ಬೀರಬಹುದಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net