ಎಕ್ಸ್‌ಪ್ರೆಸ್ ರೈಲು ರದ್ದಾಗದಿರಲಿ

Published on

ಬಳ್ಳಾರಿ : ಬೆಳಗಾವಿ ಮನುಗುರು ಎಕ್ಸ್‌ಪ್ರೆಸ್ ರೈಲನ್ನು ರದ್ದುಪಡಿಸುವ ರೈಲ್ವೆ ಇಲಾಖೆ ನಿರ್ಧಾರವನ್ನು ಖಂಡಿಸಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಕ್ರಿಯಾ ಸಮಿತಿಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.

ಬೆಳಗಾವಿ-ಮನಗೂರು ರೈಲು ವಿಶೇಷ ರೈಲಾಗಿ ನಾಲ್ಕು ದಿನ ಮಾತ್ರ ಸಂಚರಿಸದೆ ದಿನನಿತ್ಯದ ಕಾಯಂ ರೈಲಾಗಿ ಸಂಚರಿಸುವಂತೆ ರೈಲ್ವೆ ಇಲಾಖೆ ಆದೇಶ ನೀಡಬೇಕೆಂದು ಸದ್ಯಸರು ಒತ್ತಾಯಿಸಿದರು. ಎಕ್ಸ್ ಪ್ರೆಸ್ ರೈಲು ಬಜೆಟ್‌ನಲ್ಲಿ ಮಂಜೂರಾಗಿ ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಾರ್ಗವಾಗಿದೆ. ಈ ರೈಲನ್ನು ರದ್ದುಪಡಿಸುವ ಅಧಿಕಾರ ರೈಲ್ವೆ ಇಲಾಖೆಗೆ ಇರುವುದಿಲ್ಲ. ಕದಿರಿದೇವನಪಲ್ಲಿ , ಬಳ್ಳಾರಿಯಿಂದ ತಿರುಪತಿಗೆ ಸಂಚರಿಸುತ್ತಿದ್ದ ರೈಲು ಕಳೆದು ಒಂದು ವರ್ಷದಿಂದ ಗುಂತಕಲ್ ನಿಂದ ಸಂಚರಿಸುತ್ತಿದೆ. ಎಂದಿನಂತೆ ಈ ರೈಲು ಕದಿರು ದೇವನಪಲ್ಲಿ ಬಳ್ಳಾರಿಯಿಂದ ಸಂಚರಿಸಬೇಕು. ಅಲ್ಲದೆ, ಕಳೆದ ಆರು ತಿಂಗಳಿಂದ ನಿಲುಗಡೆ ಆಗಿರುವ ಚೆನ್ನೈ-ಬಳ್ಳಾರಿ-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ಪುನರ್ ಆರಂಭವಾಗಬೇಕು ಎಂದು ಆಗ್ರಹಿಸಿದರು. ರೈಲುಗಳು ಆರಂಭವಾಗದಿದ್ದಲ್ಲಿ ರೈಲು ನಿಲ್ದಾಣಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಳಿಕ ವಿವಿಧ ಬೇಡಿಕೆಗಳ ಪತ್ರವನ್ನು ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net