ಡಿಎಂಎಫ್ ಅನುದಾನ ಸದ್ಬಳಕೆಯಾಗಲಿ: ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾವತಿ ಆಗ್ರಹ

Kallukamba Pampathi Ballari
ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ.
Published on

ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಡಿಎಂಎಫ್ ಅನುದಾನ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಬ ಪಂಪಾವತಿ ಅಸವಾಧಾನ ವ್ಯಕ್ತಪಡಿಸಿದರು.

ಗಣಿ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಅನುದಾನವಿದ್ದರೂ ಜಿಲ್ಲಾಡಳಿತ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇನ್ನಾದರೂ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು. ಶಾಲೆಗಳ ಸಬಲೀಕರಣ ವಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಇನ್ನೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಲಸೆ ಹೋಗಿರುವ 17 ಶಾಸಕರನ್ನು ಮರಳಿ ಕಾಂಗ್ರೆಸ್‌ಗೆ ಕರೆದುಕೊಳ್ಳುವ ಚರ್ಚೆ ನಡೆಯುತ್ತಿದೆ. ಡಿಕೆಶಿಯವರೇ ಈ ಕುರಿತು ಪ್ರಸ್ತಾಪ ವಾಡಿದ್ದಾರೆ. ಅವರನ್ನು ಸೇರಿಸಿಕೊಳ್ಳುವುದಾದರೆ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎನ್.ಟಿ.ಬೊಮ್ಮಣ್ಣ, ಗವಿಯಪ್ಪ, ರಾಮುಲು ಸೇರಿದಂತೆ ಇತರರನ್ನೂ ಮತ್ತೆ ಪಕ್ಷಕ್ಕೆ ಕರೆ ತರಬೇಕು. ಇಲ್ಲದಿದ್ದರೆ 17 ಜನರನ್ನು ಮಾತ್ರ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು ಎಂದರು. ಮುಖಂಡರಾದ ಗುಲಾಬ್ ನಬಿ, ಎಲ್.ವಾರೆಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net