ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕರೊನಾ ಸೋಂಕಿತ ಮಹಿಳೆ

010820 Ballari Corona Women Twins Birth
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿತೆಗೆ ಜನಿಸಿದ ಅವಳಿ ಮಕ್ಕಳು.
Published on

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಸಿರಗುಪ್ಪ ಮೂಲದ ಕರೊನಾ ಸೋಂಕಿತ ಮಹಿಳೆಗೆ ಅವಳಿ ಮಕ್ಕಳು ಜನಿಸಿವೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದರು. ಹೆಣ್ಣು ಮಗು 1.8 ಕಿಲೋ ಹಾಗೂ ಗಂಡು ಮಗು 2.5 ಕಿಲೋ ತೂಕ ಇವೆ. ಎರಡೂ ಮಕ್ಕಳು ಆರೋಗ್ಯದಿಂದ ಇದ್ದು, ತೂಕ ಕಡಿಮೆ ಇರುವ ಕಾರಣಕ್ಕೆ ಹೆಣ್ಣು ಮಗುವನ್ನು ಐಸಿಯುನಲ್ಲಿ ಇರಿಸಲಾಗಿದೆ. ಸ್ತ್ರೀರೋಗ ತಜ್ಞರಾದ ಶಾರದಾ, ಲಾವಣ್ಯ, ಅರವಳಿಕೆ ತಜ್ಞ ನರೇಂದ್ರ, ಮಕ್ಕಳ ತಜ್ಞ ಸುನೀಲ್, ಶುಶ್ರೂಷಕರಾದ ಮನೀಷಾ ಹಾಗೂ ಹೊನ್ನೂರುಸ್ವಾಮಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಗೆ ಇದು ಮೂರನೇ ಹೆರಿಗೆಯಾಗಿತ್ತು. ಈ ಮೊದಲಿನ ಎರಡು ಹೆರಿಗೆಗಳು ಕೂಡ ಶಸ್ತ್ರಚಿಕಿತ್ಸೆ ಮೂಲಕ ಆಗಿದ್ದವು. ಮಹಿಳೆಗೆ ಸಿರಗುಪ್ಪದಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net