ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ಆಕ್ರೋಶ: ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಕಮ್ಮ ಯುವಶಕ್ತಿ ಮುಖಂಡರ ಪ್ರತಿಭಟನೆ

08012021 Bellary District oppose protest
Published on

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಅಖಿಲ ಕರ್ನಾಟಕ ಕಮ್ಮ ಯುವಶಕ್ತಿ ಬೆಂಬಲಿಸಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಸಮುದಾಯದ ನೂರಾರು ಮಂದಿ ಕಮ್ಮ ಭವನದಿಂದ ರಾಯಲ್ ವೃತ್ತದ ಮೂಲಕ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ವಿರುದ್ಧ ಘೋಷಣೆ ಕೂಗಿದರು.

ಮುಖಂಡರಾದ ಮುಂಡ್ಲೂರು ಶ್ರೀಧರ್, ಮುಂಡ್ಲೂರು ನಾರಾಯಣರಾವ್, ಬಾಲಾಜಿ ರವಿಕುಮಾರ್, ಶ್ರೀನಿವಾಸ್ ರಾವ್ (ವಾಸು), ಕೆ.ಎರ್ರಿಸ್ವಾಮಿ, ಪುರುಷೋತ್ತಮ ಗೌಡ, ಕುಡತಿನಿ ಶ್ರೀನಿವಾಸ್, ಜೆ.ಎಸ್.ಆಂಜನೇಯುಲು, ಮುಲ್ಲಂಗಿ ನಂದೀಶ್, ಪ್ರಭಂಜನ್ ಕುಮಾರ್, ಕೋನಂಕಿ ತಿಲಕ್ ಕುಮಾರ್, ವಿವೇಕ್(ವಿಕ್ಕಿ), ಜಗದೀಶ್, ಶಂಕರ್, ನವೀನ್, ಅನಿಲ್, ರವಿ ಹಾಗೂ ಸಿರಗುಪ್ಪ, ಕುರುಗೋಡು, ಸಂಡೂರು ತಾಲೂಕುಗಳ ಕಮ್ಮ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net