ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Published on

ಬಳ್ಳಾರಿ ; ತಾಲೂಕಿನ ಗುಡೇಕೋಟೆ, ರಾಮದುರ್ಗ ಹಾಗೂ ಚಂದ್ರಶೇಖರಪುರ ಗ್ರಾಮಗಳಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಗರಿ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಸೋಮವಾರ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಿ.ಪಾಲಯ್ಯ ಮಾತನಾಡಿ, ಮುಂಗಾರು ಬೆಳೆಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಸೂಕ್ತ ತಳಿ ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ ಹಾಗೂ ಕೃಷಿಯಲ್ಲಿ ವಿನೂತನ ತಾಂತ್ರಿಕತೆಗಳು ಮುಂತಾದವು ಕುರಿತು ರೈತರಿಗೆ ಮಾಹಿತಿಗೆ ನೀಡಿದರು.

ಹಿರಿಯ ವಿಜ್ಞಾನಿ ಡಾ.ಎಸ್.ರವಿ ಮಾತನಾಡಿ, ರೈತರು ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸುವುದರಿಂದ ತಮ್ಮ ಜಮೀನಿನಲ್ಲಿ ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿದೆ ಹಾಗೂ ಅದು ಬೆಳೆಗಳಿಗೆ ಯಾವ ಪ್ರಮಾಣದಲ್ಲಿ ದೊರೆಯುತ್ತದೆ. ಮಣ್ಣು ಫಲವತ್ತತೆಯನ್ನು ಯಾವ ರೀತಿ ಸಮತೋಲನವಾಗಿ ಕಾಪಾಡಿಕೊಳ್ಳಬಹುದು ಎಂಬುದಾಗಿ ವಿವರಿಸಿದರು.

ವಿವಿಧ ಗ್ರಾಮದ ಸಾವಿರಕ್ಕೂ ಅಧಿಕ ರೈತರು ಅಭಿಯಾನದಲ್ಲಿ ಭಾಗವಹಿಸಿ ಕೃಷಿಯ ಸಲಹೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net