ಕರ್ತವ್ಯ ಲೋಪ, ಅಧಿಕಾರಿ ವಂಚನೆ

Published on

ಬಳ್ಳಾರಿ ; ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನೊಬ್ಬ ವಾಹನ ತೆರಿಗೆ ಹಾಗೂ ಶುಲ್ಕದ ಹಣವನ್ನು ಸರ್ಕಾರಕ್ಕೆ ಪಾವತಿಸದೆ 16.72 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ ರವಿ ತಾವೇರ ಖೇಡ ಆರೋಪಿ. ನಗರದ ಪ್ರಾದೇಶಿಕ ಕಚೇರಿಯಲ್ಲಿ ಕಳೆದ ತಿಂಗಳು ಮೇ 21 ಹಾಗೂ ಮೇ 26 ರಿಂದ 31 ರವರೆಗೆ ಸಾರ್ವಜನಿಕರಿಂದ ಪಾವತಿಯಾದ 16,72,517 ರೂ. ಹಣವನ್ನು ಸರ್ಕಾರಕ್ಕೆ ಪಾವತಿಸದೆ ಕರ್ತವ್ಯ ಲೋಪ ಎಸಗಿ ವಂಚಿಸಿದ್ದಾನೆ. ಆರೋಪಿ ವಿರುದ್ಧ ಕಚೇರಿಯ ಅಧೀಕ್ಷಕ ವೀರೇಶ್ ದೂರು ನೀಡಿದ್ದಾರೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net