ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Published on

ಬಳ್ಳಾರಿ : ಸೇವಾ ಹಿರಿತನದ ಆಧಾರದಲ್ಲಿ ಅತಿಥಿ ಉಪನ್ಯಾಸಕರಿಗೆ ನೆಟ್/ಸ್ಲೆಟ್/ಪಿಎಚ್‌ಡಿ ಅರ್ಹತೆ ಹೊಂದಲು ಇನ್ನೂ ಮೂರು ವರ್ಷ ಕಾಲಾವಕಾಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಇಲ್ಲಿನ ಡಿಸಿ ಕಚೇರಿಯಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ಹತ್ತಾರು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಾ ಸರ್ಕಾರದ ಖಜಾನೆಯಲ್ಲಿ ಉಳಿತಾಯವನ್ನು ಮಾಡಿದ್ದೇವೆ. ಯುಜಿಸಿ ಪ್ರಕಾರ ವೇತನ ಸಹಿತ ಪಡೆದಿರುವುದಿಲ್ಲ. ಒಂದು ವೇಳೆ ಯುಜಿಸಿ ನಿಯಾಮವಳಿ ಪ್ರಕಾರ ಈ ಬಾರಿ ಕೌನ್ಸಿಲಿಂಗ್ ನಡೆಸಿದ್ದೇ ಅದಲ್ಲಿ ರಾಜ್ಯದ ಐದು ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಅಲ್ಪ ಸಂಬಳಕ್ಕೆ ಸೇವೆ ಸಲ್ಲಿಸುವಾಗ ಯಾರೂ ಅರ್ಹರು ಬರಲಿಲ್ಲ ಈಗ ಗೌರವಧನ ಹೆಚ್ಚಾಗಿದೆ ಎಂದು ಸ್ಪರ್ಧೆಯನ್ನೋಡುತ್ತಿದ್ದಾರೆ. ಆದ್ದರಿಂದ, ಯುಜಿಸಿ ನಿಯಾಮಾವಳಿಯನ್ನು ಬದಿಗಿಟ್ಟು ನಮ್ಮ ಭವಿಷ್ಯ ರಕ್ಷಣೆ ಮಾಡಬೇಕು. ಯುಜಿಸಿ ನಿಯಾಮವಳಿಯಂತೆ ಒಂದು ವೇಳೆ ನೇಮಕ ಮಾಡುವುದಾದರೆ ಅರ್ಹತೆ ಹೊಂದಲು ಅತಿಥಿ ಉಪನ್ಯಾಸಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಇನ್ನೂ ಮೂರು ವರ್ಷ ಸಮಯ ಒದಗಿಸಬೇಕು. ಜುಲೈ 2009ರ ಪೂರ್ವದಲ್ಲಿ ಎಂ.ಫಿಲ್ ವಿದ್ಯಾರ್ಹತೆ ಪೂರೈಸಿದವರನ್ನು ಸಹ ಪರಿಗಣಿಸಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net