ಬಳ್ಳಾರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ (ಗ್ರಾಕೂಸ್)ಸಂಘಟನೆ ವತಿಯಿಂದ ಇಲ್ಲಿನ ಎಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗಂಡ ಬಿಟ್ಟಿರುವ (ಅಧಿಕೃತ ವಿಚ್ಛೇಧನ ಸಿಗದಿರುವುದು), ಗಂಡ ಸತ್ತಿರುವ ಹಾಗೂ ಮದುವೆ ಆಗದೆ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಒಂಟಿ ಮಹಿಳೆಯರಿಗೆ ವಿಶೇಷವಾಗಿ ಪ್ರತ್ಯೇಕವಾಗಿ ಪಡಿತರ ಚೀಟಿ ವಿತರಿಸಬೇಕು. ದೇಶದಲ್ಲಿ ಅಪೌಷ್ಠಿಕ ಮಕ್ಕಳು ಹಾಗೂ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಅತಿ ಅಗತ್ಯ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅದನ್ನು ಕೊಂಡುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ರಾಗಿ, ಜೋಳ, ತೊಗರಿ ಬೆಳೆ ಹಾಗೂ ಎಣ್ಣೆ ನ್ಯಾಯಬೆಲೆಯ ಅಂಗಡಿಯ ಮೂಲಕ ವಿತರಿಸಬೇಕು. ಹೊಸ ರೇಷನ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ರೇಷನ್ ಕಾರ್ಡ್ ದೊರೆಯುತ್ತಿಲ್ಲ . ನಿಜವಾದ ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿ ಸಂಘಟನಕಾರರು ಮನವಿ ಸಲ್ಲಿಸಿದರು.