ಬಳ್ಳಾರಿ ; ರಾಜ್ಯಾದ್ಯಂತ ದಿನೇದಿನೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಶಾಖೋತ್ಪನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯ ಬೇಡಿಕೆಯೂ ಹೆಚ್ಚಿದೆ. ರಾಜ್ಯದಲ್ಲಿ ಈ ಬಾರಿ ಸಮೃದ್ಧ ಮಳೆ ಸುರಿದ ಪರಿಣಾಮ ಈವರೆಗೆ ತಂಪಾದ ವಾತವರಣ ಕೂಡಿತ್ತು. ಮಾರ್ಚ್ ಕೊನೆಯ ವಾರದಿಂದ ಎಲ್ಲ ಜಿಲ್ಲೆಗಳಲ್ಲಿ ನಿಧಾನಗತಿಯಲ್ಲಿ ಏರುವ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ದಾರೆ.ಆದ್ದರಿಂದ, ಮನೆ ಹಾಗೂ ಕಚೇರಿಗಳಲ್ಲಿ ಫ್ಯಾನ್, ಏರ್ ಕೂಲರ್, ಎಸಿಗಳ ಮೂಲಕ ತಣ್ಣನೆಯ ಗಾಳಿ ಹಾಗೂ ಬೆಳಕಿನ ಆಶ್ರಯ ಪಡೆಯಲು ಮುಂದಾಗಿದ್ದಾರೆ.
ಕಳೆದ ವರ್ಷ ಸಕಾಲಕ್ಕೆ ಮಳೆ ಸುರಿಯದೆ ಭೀಕರ ಬರಗಲ ಎದುರಾಗಿತ್ತು. ಮಳೆ ಸುರಿಯದೆ ಭೀಕರ ಬರಗಾಲ ಎದುರಾಗಿತ್ತು. ರೈತರು ಬೆಳೆದಿದ್ದ ಬೆಳೆ ಒಣಗಿ ಸಾಲದ ಸುಳಿಗೆ ಸಿಲುಕಿದ್ದರು. ಬೇಸಿಗೆ ಬಿರು ಬಿಸಿಲಿನ ಖಾಖಕ್ಕೆ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಏರಿಕೆಯಲ್ಲಿ ಸಾಗಿತ್ತು.
ಪ್ರಸ್ತಕ ಸಾಲಿನಲ್ಲಿ ಬಳ್ಳಾರಿಯ ಬಿಟಿಪಿಎಸ್‌ನ ಮೂರರಲ್ಲಿ ಕೇವಲ ಎರಡು ಯೂನಿಟ್‌ಗಳಿಂದ 531ಮೆವಾ (1700 ಮೆವಾ ಸಾಮರ್ಥ್ಯ) ಉತ್ಪಾದಿಸಲಾಗುತ್ತಿದ್ದು. ಒಂದು ಯೂನಿಟ್‌ಗೆ ವಿಶ್ರಾಂತಿ ನೀಡಲಾಗಿದೆ. ರಾಯಚೂರಿನ ಆರ್‌ಟಿಪಿಎಸ್‌ನ ಎಂಟು ಯೂನಿಟ್‌ಗಳಿಂದ 888 ಮೆವಾ (1720 ಮೆವಾ ಸಾಮರ್ಥ್ಯ) ವಿದ್ಯುತ್ ಉತ್ಪಾದನೆ ನಡೆದಿದ್ದು ಎರಡು ಯೂನಿಟ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ. ಯರಮಸ್ ಎರಡು ಯೂನಿಟ್‌ಗಳಲ್ಲಿ 1071ಮೆವಾ (1600 ಮೆವಾ ಸಾಮರ್ಥ್ಯ)ಉತ್ಪಾದನೆಯಿದೆ. ಉಡುಪಿಯಲ್ಲಿ 1200 ಮೆವಾ ಸಾಮರ್ಥ್ಯದ 600 ಮೆವಾ ಹಾಗೂ ನಾಗಝುರಿ ಆರು ಯೂನಿಟ್‌ಗಳ ಪೈಕಿ ಒಂದು ಯೂನಿಟ್‌ಗೆ ವಿಶ್ರಾಂತಿ ನೀಡಿ 679 ಮೆವಾ (900 ಮೆವಾ ಸಾಮರ್ಥ್ಯ) ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೆ, ಶರವತಿ ಘಟಕದಿಂದ ಯಾವ ಯೂನಿಟ್‌ಗೂ ವಿಶ್ರಾಂತಿ ನೀಡದೆ ಹತ್ತು ಯೂನಿಟ್‌ಗಳಿಂದ 727 ಮೆವಾ (1035 ಮೆವಾ ಸಾಮರ್ಥ್ಯ) ಉತ್ಪಾದಿಸಲಾಗುತ್ತಿದೆ.
ಉತ್ಪಾದನೆ : ಈ ಬಾರಿ ರಾಜ್ಯದಲ್ಲಿ ಸುರಿದ ಮಳೆಯಿಂದ ವಿದ್ಯುತ್ ಘಟಕಗಳಲ್ಲಿ ಹಲವು ತಿಂಗಳು ಕೆಲ ಯೂನಿಟ್‌ಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಸದ್ಯ, ದಿನೇದಿನೆ ತಾಪ ಏರುತ್ತಿರುವುದರಿಂದ ಎಲ್ಲ ಯೂನಿಟ್‌ಗಳಲ್ಲಿ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಬೇಡಿಕೆ ತಗ್ಗಿಸಲು ಮುಂದಾಗಿದೆ. ವರಾಹಿ 154 ಮೆವಾ (460 ಸಾಮರ್ಥ್ಯ), ಕೊಡಸಳ್ಳಿ 116 ಮೆವಾ (120 ಸಾಮರ್ಥ್ಯ), ಖದ್ರಾ 23ಮೆವಾ (150 ಸಾಮರ್ಥ್ಯ), ಗೇರುಸೊಪ್ಪ , ಜೋಗ, ಸೂಪಾ, ಸೇರಿದಂತೆ ವಿವಿಧ ಜಲವಿದ್ಯುತ್ ಘಟಕಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯದ ಎಲ್ಲ ವಿದ್ಯುತ್ ಘಟಕಗಳಿಂದ 11706.6 ಮೆವಾ ಸಾಮರ್ಥ್ಯವಿದ್ದು, ಇದರಲ್ಲಿ 5113 ಮೆವಾ ವಿದ್ಯುತ್ ಉತ್ಪಾದಿಸಲಾಗಿದೆ. ಕೆಲ ವರ್ಷಗಳಿಂದ ಮಹಾರಾಷ್ಟ್ರ, ಅಹಮಬಾದ್, ಛತ್ತಿಸ್‌ಗಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾಲದ ರೂಪದಲ್ಲಿ ವಿದ್ಯುತ್ ಉತ್ಪಾದನೆ ಅಮದು ಮಾಡಿಕೊಳ್ಳಲಾಗಿತ್ತು. ಈಗ ಬೇರೆ ರಾಜ್ಯಗಳಿಂದ ಅಮದು ಮಾಡಿಕೊಳ್ಳುವ ಹೊರೆ ಕೂಡ ತಗ್ಗಲಿದ್ದು ಆರ್ಥಿಕತೆಗೂ ಅನುಕೂಲವಾಗಲಿದೆ. ಅಲ್ಲದೆ, ಎಲ್ಲ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆ ಬೇಕಾಗಿರುವ ಕಚ್ಚಾ ವಸ್ತುಗಳ ಸೌಲಭ್ಯವಿದ್ದು ಈ ವರ್ಷ ವಿದ್ಯುತ್ ಹೊರೆಯಾಗದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕೋಟ್.... ಬಳ್ಳಾರಿಯ ಬಿಟಿಪಿಎಸ್‌ನ ಮೂರು ಯೂನಿಟ್‌ಗಳ ಪೈಕಿ ಒಂದು ಯೂನಿಟ್ ಮೈನರ್ ರಿಪೇರಿ ಕಾರಣದಿಂದ ವಿಶ್ರಾಂತಿ ನೀಡಲಾಗಿದೆ. ಗುರುವಾರ ಸಂಜೆಯಿಂದ ಆ ಯೂನಿಟ್ ಸಿದ್ಧಗೊಳಿಸಿ ವಿದ್ಯುತ್ ಉತ್ಪಾದಿಸಲಾಗುವುದು. ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಯಾಗದೆ ಕೊರತೆಯಾಗದಂತೆ ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆಕೈಗೊಳ್ಳಲಾಗಿದೆ.
- ಉದಯ ನಾಯ್ಕ, ಎನ್., ಇಡಿ, ಬಿಟಿಪಿಎಸ್, ಬಳ್ಳಾರಿ.