ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

Published on

ಬಳ್ಳಾರಿ ; ಡೀಸಲ್ ದರ ಹೆಚ್ಚಳ, ಟೋಲ್ ಹಾಗೂ ಎ್ಸಿ ಶುಲ್ಕ ಹೆಚ್ಚಳ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಬುಧವಾರ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಲಾರಿ ಮಾಲೀಕರ ಸಂಘದ ಮಾಜಿ ಕಾರ್ಯದರ್ಶಿ ಎನ್.ಎಂ.ಬಸವರಾಜ್ ಮಾತನಾಡಿ, ಕಳೆದ ವರ್ಷ ಜೂನ್‌ನಲ್ಲಿ 3 ರೂ. ಡೀಸಲ್ ದರ ಹೆಚ್ಚಳ ಮಾಡಿದ್ದರು. ಈಗ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ 2 ರೂ. ಡೀಸಲ್ ದರ ಹೆಚ್ಚಿಸಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಲಾರಿ ಉದ್ಯಮದಿಂದ ಅತಿ ಹೆಚ್ಚು ತೆರಿಗೆ ಜಮಾ ಆಗುತ್ತಿದೆ. ಸರ್ಕಾರದಿಂದ ಲಾರಿ ಉದ್ಯಮಕ್ಕೆ ಯಾವುದೇ ಅಗತ್ಯ ಅನುಕೂಲ ಇಲ್ಲದಿದ್ದರೂ, ಬೆಲೆ ಏರಿಕೆಗಳಿಂದ ಲಾರಿ ಮಾಲೀಕರು ತತ್ತಾರಿಸಿದ್ದಾರೆ. ಉದ್ಯಮದ ಮೇಲೆ ಬಹಳ ವ್ಯತಿರಿಕ್ತವಾದ ಪರಿಣಾಮ ಉಂಟಾಗುವುದರಿಂದ ಚಾಲಕ ಕೊರತೆ ಎದುರಿಸುತ್ತಿದ್ದೇವೆ. ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅನಧಿಕೃತ ಟೋಲ್‌ಗೇಟ್‌ಗಳು ಹೆಚ್ಚಾಗಿವೆ. ವಾಹನಗಳಿಗೆ ಪ್ರವೇಶವಿಲ್ಲ ಹೆಸರಿನಲ್ಲಿ ಚಾಲಕರಿಗೆ ಪೊಲೀಸರು ಮತ್ತು ಆರ್‌ಟಿಒಗಳಿಂದ ಕಿರುಕುಳ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net