ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದ ನಡೆದಿರುವ ಅಕ್ರಮ ಜೋಳ ನೋಂದಣಿಯನ್ನು ರದ್ದುಗೊಳಿಸಿ, ಮರುನೋಂದಣಿ ಪ್ರಾರಂಭಿಸಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್)ವತಿಯಿಂದ ಇಲ್ಲಿನ ಎಪಿಎಂಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಜೋಳ ಅಕ್ರಮವಾಗಿ ನೋಂದಣಿಯಾಗಿರುವುದು ಆಡಳಿತ ವರ್ಗ ರೈತರಿಗೆ ಮಾಡಿದ ದ್ರೋಹವಾಗಿದೆ. ಇದು ಹೀಗೆ ಮುಂದುವರಿದರೆ ಇಡೀ ವ್ಯವಸ್ಥೆ ವಿರುದ್ಧ ರೈತ ಸಮುದಾಯ ಬೃಹತ್ ಪ್ರತಿಭಟನೆ ಮಾಡಲಾಗುವುದು. ಮೇಲಾಧಿಕಾರಿಗಳು ಪ್ರತಿ ವರ್ಷ ನಡೆಯುವ ಈ ಅಕ್ರಮವನ್ನು ನಿಲ್ಲಿಸಲು ವಿಫಲವಾಗಿದ್ದಾರೆ. ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸರ್ಕಾರ ಮತ್ತು ಅಧಿಕಾರಿಗಳು ರೈತರ ಜೋಳ ಖರೀದಿಯನ್ನು ಪಾರದರ್ಶಕ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನ ಸ್ಥಳಕ್ಕೆ ಎಡಿಸಿ ಮಹ್ಮಮದ್ ಜುಬೇರ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು. ಅಕ್ರಮವಾಗಿ ಜೋಳ ನೋಂದಣಿಯಾಗಿದ್ದಾರೆ ಕೂಡಲೇ ರದ್ದುಗೊಳಿಸಲಾಗುವುದು. ಜಿಲ್ಲಾದ್ಯಂತ ಆರು ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿಸುವ ಅವಕಾಶವಿದೆ. ಎಲ್ಲ ನೋಂದಣಿ ಕೇಂದ್ರಗಳ ಮೂಲಕ ಖರೀದಿಸಲಾಗುವುದು ಎಂದು ಭರವಸೆ ನೀಡಿದರು.