ಬಳ್ಳಾರಿ : ಜಿಲ್ಲೆಯ ಬಾಣಂತಿಯರ ಸಾವಿಗೆ ಕಾರಣವಾದ ರಿಂಗರ್ ಲ್ಯಾಕ್ಟೇಟ್(ಐವಿ ದ್ರಾವಣ)ದ ವರದಿಯನ್ನು ಸರ್ಕಾರ ಬಹಿರಂಗೊಳಿಸಿದೆ ವಿಳಂಬ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ತನಿಖೆಗಾಗಿ ನೇಮಿಸಿದ್ದ ತಂಡ ಸರ್ಕಾರಿ ಔಷಧಾಲಯದಿಂದ ಪೂರೈಕೆಯಾದ ದೋಷಪೂರಿತ ರಿಂಗರ್ ಲ್ಯಾಕ್ಟೇಟ್(ಐವಿ ದ್ರಾವಣ) ಕಾರಣವೆಂದು ಎಂಬುದು ವರದಿಯಲ್ಲಿ ತಿಳಿಸಲಾಗಿತ್ತು. ಆದ್ದರಿಂದ, ಐವಿ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿ ಹಲವೂ ದಿನಗಳೂ ಕಳೆದರೂ ಈವರೆಗೂ ಮಾತ್ರ ಮಾಹಿತಿ ಬಹಿರಂಗಗೊಳಿಸಿಲ್ಲ. ಈಗಿರುವಾಗಲೇ ಸರ್ಕಾರ ಹೊಸದೊಂದು ಉನ್ನತ ತಜ್ಞರ ಸಮಿತಿ ನೇಮಿಸಿದ್ದು ಐದು ದಿನಗಳೊಳಗಾಗಿ ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಕೆಎಸ್‌ಎಂಎಸ್‌ಸಿಎಲ್ ರವರು ಟೆಂಡರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ಡ್ ಲ್ಯಾಬೋರೇಟರಿಗಳಿಗೆ ಔಷಧಿಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ, ಕೆಎಸ್‌ಎಂಎಸ್‌ಸಿಎಲ್ ಪಾತ್ರ ಮತ್ತು ಲೋಪ ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿ ಸೇರಿದಂತೆ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ. ಆದರೆ, ಮೊದಲ ತನಿಖೆ ತಂಡದ ಪೂರ್ಣ ಪ್ರಮಾಣದ ವರದಿಯ ಮಾಹಿತಿ ನೀಡಲು ವಿಳಂಬವಾಗುತ್ತಿದೆ. ಇನ್ನೂ ರಾಜ್ಯಮಟ್ಟದಲ್ಲಿ ಕೈಗೊಂಡಿರುವ ತನಿಖೆಗೆ ತಿಂಗಳೇ ಕಳೆಯಲಿದೆ ಎಂಬ ಮಾತುಗಳು ಜೋರಾಗಿವೆ. ವರದಿಯ ಬಗ್ಗೆ ಆರೋಗ್ಯ ತಜ್ಞರೊಬ್ಬರು ಪ್ರತಿಕ್ರಿಯಿಸಿ, ಸಾಮಾನ್ಯ ಪ್ರಕರಣಗಳಲ್ಲಿ ಸಂಶಯಸ್ಪದವಾಗಿ ವರದಿ ನೀಡಬಹುದು. ಆದರೆ, ಇದು ಆರೋಗ್ಯ ಇಲಾಖೆಯ ಸಂಬಂಧಿಸಿದ್ದು ಆಗಿರುವುದರಿಂದ ಪ್ರತಿಯೊಂದನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಬೇಕಾಗುತ್ತದೆ. ಅಲ್ಲದೆ, ಒಂದು ಔಷಧಿಯು ಕೆಲ ದಿನಗಳ ಬಳಿಕ ಮಾಹಿತಿ ದೊರೆಯಲಿದೆ. ಇನ್ನೂ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಐದು ದಿನಗಳೊಳಗಾಗಿ ವರದಿ ನೀಡುವುದು ಅಸಾಧ್ಯ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟರು.
====