ಬಳ್ಳಾರಿ; ಇಲ್ಲಿನ ರೇಡಿಯಾ ಪಾರ್ಕ್‌ದಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪದವಿಯ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಕಾಲೇಜು ಪ್ರಾಂಶುಪಾಲೆ ಡಾ.ಕೆ.ವಿ.ಪ್ರಜ್ಞಾ ಹೇಳಿದರು.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ವಿದ್ಯಾರ್ಥಿನಿಯರ ಶೈಕ್ಷಣಿಕ ಅನುಕೂಲಕ್ಕಾಗಿ 2014ರಲ್ಲಿ ಸ್ಥಾಪನೆಯಾಗಿದೆ. ಬಿಎ, ಬಿ.ಕಾಂ, ಕೋರ್ಸ್‌ಗಳಿದ್ದು, ಪ್ರಸ್ತಕ ಸಾಲಿನಲ್ಲಿ ಬಿಎಸ್ಸಿ ಕೂಡ ಪ್ರಾರಂಭಿಸಲಾಗುವುದು. ಐದು ಕಾಯಂ ಹಾಗೂ ಹದಿನೈದು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ 35 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಕಾಲೇಜು ಪ್ರಸ್ತುತ 351 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ಅಕ್ಕಮಹಾದೇವಿ ವಿಶ್ವವಿದ್ಯಾಲಯದಡಿ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜಿನಲ್ಲಿ ಕುಡಿವ ನೀರಿ ವ್ಯವಸ್ಥೆ, ಸ್ಮಾರ್ಟ್ ತರಗತಿಗಳು, ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯವಿದೆ. ಅಲ್ಲದೆ, ಎನ್‌ಎಸ್‌ಎಸ್, ಕ್ರೀಡಾ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಸ್ಮರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ನೀಡುತ್ತಿದ್ದು, ಸರ್ಕಾರಿ ವಸತಿ ನಿಲಯಗಳ ಸೌಲಭ್ಯವಿದೆ. ವಿದ್ಯಾರ್ಥಿನಿಯರ ಅಪ್ತ ಸಮಾಲೋಚನೆ ಘಟಕವಿದ್ದು, ಅಂತರಿಕ ದೂರು ಸಮಿತಿ ಕೂಡವಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಕಾಲೇಜಿನ 38 ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ. ಪ್ರವೇಶಾತಿ ಬಗ್ಗೆ ಮಾಹಿತಿ ಪಡೆಯಲು ಮೊ. 9448419475 ಸಂಪರ್ಕಿಸಬಹುದು ಎಂದರು.
ಕಾಲೇಜಿನಲ್ಲಿ ಈ ಎಲ್ಲ ಸೌಲಭ್ಯವಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ದಾಖಲಾತಿ ಆಗುತ್ತಿಲ್ಲ. ಆದ್ದರಿಂದ, ಪ್ರತಿ ವರ್ಷ ಕಾಲೇಜಿನ ಉಪನ್ಯಾಸಕರು ಸುತ್ತಲಿನ ಎಲ್ಲ ಹಳ್ಳಿಗಳಲ್ಲಿ ಸಂಚರಿಸಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಶ್ರಮಪಡುತ್ತಿದ್ದಾರೆ ಎಂದರು. ನಗರದ ವಾಲ್ಮೀಕಿ ಭವನದ ಮುಂಭಾಗದಲ್ಲಿ ಕಾಲೇಜಿನ ನೂತನ ಕಟ್ಟಡಕ್ಕಾಗಿ ಎರಡು ಎಕರೆ ಭೂಮಿ ಮಂಜೂರು ಮಾಡಿದ್ದು, ಕೆಲ ದಿನಗಳಲ್ಲೆ ನೂತನ ಕಟ್ಟಡದ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.