ನವಜಾತ ಶಿಶು ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ

Published on

ಬಳ್ಳಾರಿ : ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ನವಜಾತು ಶಿಶುವೊಂದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಬಾಣಂತಿ ಗಂಗೋತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆರಂಭದಲ್ಲಿ ನಾರ್ಮಲ್ ಹೆರಿಗೆಗೆ ವೈದ್ಯರು ಪ್ರಯತ್ನಿಸಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಒಳಪಡಿಸಿ ಹೆರಿಗೆ ಮಾಡಲಾಗಿತ್ತು. ಮಗು ಜನ್ಮಿಸಿದ ಕೆಲ ಗಂಟೆವರೆಗೆ ಬದುಕು ಉಳಿದಿತ್ತು. ವೈದ್ಯರ ಅವೈಜ್ಞಾನಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದ ಮಗು ಸಾವು ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಕುಟುಂಬಸ್ಥರು ನಾರ್ಮಲ್ ಹೆರಿಗೆ ಆಗಲಿ ಸಿಸೇರಿಯನ್ ಬೇಡ ಎಂಬುದಾಗಿ ತಡೆದಿದ್ದರು. ಅಲ್ಲದೆ ಮಗುವಿಗೆ ‌ಮೆಕ್ಯೂನಿಯಂ ಎಂಬ‌ ಕಾಯಿಲೆಯಾಗಿ ಮೃತಪಟ್ಟಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಟಿ. ಗಂಗಾಧರ ಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net