ಬಳ್ಳಾರಿ ಡಿಸಿ ಕಚೇರಿ 14 ಸಿಬ್ಬಂದಿಗೆ ಕರೊನಾ ದೃಢ, ಜಿಲ್ಲಾಧಿಕಾರಿ ಹೋಂ ಕ್ವಾರಂಟೈನ್

corona
Published on

ಬಳ್ಳಾರಿ: ಡಿಸಿ ಕಚೇರಿಯ 14 ಸಿಬ್ಬಂದಿಗೆ ಮಂಗಳವಾರ ಕರೊನಾ ದೃಢಪಟ್ಟಿದೆ. ಹೀಗಾಗಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ನಗರದ ಅನಂತಪುರ ರಸ್ತೆಯಲ್ಲಿರುವ ನಿವಾಸದಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮಂಗಳವಾರದಿಂದ ಶನಿವಾರದವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದು, ಮನೆಯಿಂದಲೇ ಕೆಲಸ ಮಾಡಲಾಗುವುದು ಎಂದು ಡಿಸಿ ನಕುಲ್ ತಿಳಿಸಿದ್ದಾರೆ. ಅಧಿಕಾರಿಗಳು ಡಿಸಿ ನಿವಾಸಕ್ಕೆ ಹೋಂ ಕ್ವಾರಟೈನ್ ಬೋರ್ಡ್ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net