ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ?

Published on

ಬಳ್ಳಾರಿ ; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಹೈಕೋರ್ಟ್‌ನಿಂದ ಜಾಮೀನು ಪಡೆದು ಇಲ್ಲಿನ ಕೇಂದ್ರ ಕಾರಾಗೃಹದಿಂದ ಕಳೆದ 2024ರ ಅಕ್ಟೋಬರ್ 30 ರಂದು ಬಿಡುಗಡೆಗೊಂಡಿದ್ದರು. ಗುರುವಾಋ ಸ್ರುಪೀಂ ಕೋರ್ಟ್ ಜಾಮೀನು ರದ್ದು ಹಿನ್ನೆಲೆ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಿರೆಯೇ ?.

ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿ ರಾಜ್ಯಾತಿಥ್ಯ ಹಿನ್ನೆಲೆ ರೇಣುಕಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ನಾನಾ ಜೈಲುಗಳಿಗೆ ವರ್ಗಾವಣೆಗೊಳಿಸಲಾಗಿತ್ತು. ಅದರಲ್ಲಿ ದರ್ಶನ್ ಆ. 29ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದರು.

ಜಾಮೀನು ದೊರೆತ ಸಂತಸದಲ್ಲಿದ್ದ ದರ್ಶನ್‌ಗೆ ಹತ್ತು ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಶಾಕ್ ನೀಡಿದೆ. ಆದ್ದರಿಂದ, ಮರಳಿ ಬಳ್ಳಾರಿ ಜೈಲಿಗೆ ದರ್ಶನ್ ವರ್ಗಾವಣೆಗೊಂಡರೆ ಕಳೆದ ಬಾರಿ ಹೈ ಸೆಕ್ಯೂರಿಟಿ ಸೆಲ್‌ನಲ್ಲಿಯೇ ಬಂಧಿಸಲಾಗಿದ್ದ ಕೊಠಡಿಯಲ್ಲಿ ಇಡಲಾಗುವುದು. ಸದ್ಯ ಹೈ ಸೆಕ್ಯೂರಿಟಿ ಸೆಲ್ ಬದಿಯರುವ ಕೈದಿಗಳನ್ನು ಬೇರೆ ಸೆಲ್‌ಗಳಿಗೆ ಸ್ಥಳಾಂತರಿಸಲಾಗುವುದು. ಈವರೆಗೆ ಇಲಾಖೆಯಿಂದ ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾವಣೆಯಾಗುವ ಬಗ್ಗೆ ಯಾವುದೇ ಮಾಹಿತಿಲ್ಲ. ಆದೇಶ ಬಂದರೆ ಕೆಲವೊಂದು ಬದಲಾವಣೆ ಮಾಡಲಾಗುವುದು ಎಂಬುದಾಗಿ ಜೈಲು ಅಧೀಕ್ಷಕಿ ಲತಾ ತಿಳಿಸಿದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net