ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ಭೇಟಿಗೆ ನಟ ಧನ್ವೀರ್ ಹಾಗೂ ಸಂಬಂಧಿ ಸುಶಾಂತ ನಾಯ್ಡು ಶುಕ್ರವಾರ ಆಗಮಿಸಿದ್ದರು.
ಕೆಲ ದಿನಗಳ ಹಿಂದೆ ಬೆನ್ನು ನೋವಿನಿಂದ ಬಳಲುತ್ತಿದ್ದರಿಂದ ಸ್ಕಾೃನಿಂಗ್‌ಗೆ ಒಳಪಡಿಸಲಾಗಿತ್ತು. ಇದರನ್ವಯ ಎಂಆರ್‌ಐ ಹಾಗೂ ಸಿಟಿ ಸ್ಯಾನಿಂಗ್ ವರದಿಯ ಮಾಹಿತಿ ಹಾಗೂ ದರ್ಶನ್ ಆರೋಗ್ಯ ವಿಚಾರಣೆ ಮತ್ತು ತಿಂಡಿ, ಬಟ್ಟೆಗಳನ್ನು ತಂದಿದ್ದರು. ಕೆಲ ಕಾಲ ಅಪ್ತರೊಂದಿಗೆ ದರ್ಶನ್ ಚರ್ಚಿಸಿ ಬಳಿಕ ತಿಂಡಿ, ಬಟ್ಟೆಯ ಎರಡು ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವ ವೇಳೆ ಬೆನ್ನು ನೋವಿನಿಂದ ಸುಸ್ತಾಗಿ ಸೆಲ್‌ಗೆ ಹೋಗುವ ರಸ್ತೆಯಲ್ಲಿ ಕೆಲ ಕುಳಿತುಕೊಂಡು ವಿಶ್ರಾಂತಿ ಪಡೆದು ಹೈ ಸೆಕ್ಯೂರಿಟಿ ಸೆಲ್‌ಗೆ ತೆರಳಿದರು. ದರ್ಶನ್ ಎಂಆರ್‌ಐ ಹಾಗೂ ಸಿಟಿ ಸ್ಕಾೃನಿಂಗ್ ವರದಿಯನ್ನು ಕೋರ್ಟ್‌ಗೆ ಮೇಲ್ ಮಾಡಲಾಗಿದೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.