ನ.23ಕ್ಕೆ ದಮ್ಮೂರು ಗ್ರಾಪಂ ಉಪಚುನಾವಣೆ

Published on

ಬಳ್ಳಾರಿ : ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಪಂ ತೆರವಾದ 1 ಸ್ಥಾನಕ್ಕೆ ನ.23 ರಂದು ಉಪಚುನಾವಣೆ ನಡೆಯಲಿದೆ. ದಮ್ಮೂರು ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಬರುವ ಎಲ್ಲ ವಿಧದ ಅಬಕಾರಿ ಸನ್ನದ್ದುಗಳನ್ನು ನ.21 ರ ಸಂಜೆ 05 ಗಂಟೆಯಿಂದ ನ.23 ರ ಸಂಜೆ 05 ಗಂಟೆಯವರೆಗೆ ಮದ್ಯ ಮಾರಾಟ, ಸಂತೆ ಜಾತ್ರೆ ನಿಷೇಧ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಲೈಸನ್ಸ್‌ದಾರರ ಹೊಂದಿರುವ ಆಯುಧಗಳನ್ನು ಸಂಬಂಧಪಟ್ಟ ಠಾಣೆಯಲ್ಲಿ ಠೇವಣಿ ಮಾಡುವಂತೆ ಎಂದು ಡಿಸಿ ಪ್ರಶಾಂತಕುಮಾರ ಮಿಶ್ರಾ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net