ಗ್ರಾಹಕಸ್ನೇಹಿ ಚಟುವಟಿಕೆಗಳ ಕೇಂದ್ರಕ್ಕೆ ಪ್ರಯತ್ನ, ಜನತಾಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಹೇಳಿಕೆ

260922 Ballari Jantabazar Annual Mahajanasabha
ಬಳ್ಳಾರಿಯ ಬಿಡಿಎಎ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಜನಸಭೆಯನ್ನು ಜನತಾಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಉದ್ಘಾಟಿಸಿದರು.
Published on

ಬಳ್ಳಾರಿ: ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ವನ್ನು ಗ್ರಾಹಕ ಸ್ನೇಹಿ ಚಟುವಟಿಕೆಗಳ ಕೇಂದ್ರವನ್ನಾಗಿಸಲು ಶ್ರಮಿಸುತ್ತೇವೆ ಎಂದು ಜನತಾಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಹೇಳಿದರು.

ನಗರದ ಬಿಡಿಎಎ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ನಡೆದ ವಾರ್ಷಿಕ ಮಹಾಜನಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ಸರ್ಕಾರಿ ಕಛೇರಿಗಳಿಗೆ ಸ್ಟೇಷನರಿಗಳನ್ನು ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ದೈನಂದಿನ ದಿನಸಿಗಳು, ಆಹಾರ ಧಾನ್ಯಗಳು ಸಿಗುವಂತೆ ಮಾಡಲು ಜನತಾ ಬಜಾರ್‌ನ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಪರಿಣಿತ ಸದಸ್ಯ ಜಿ.ವೀರಶೇಖರರೆಡ್ಡಿ ಮಾತನಾಡಿ, ಸಂಘದ ಆರ್ಥಿಕ ಚುಟವಟಿಕೆಗಳನ್ನು ಚುರುಕುಗೊಳಿಸಲು ಸಂಘದ ಎಲ್ಲ ನಿರ್ದೇಶಕರು ಉತ್ಸುಕರಾಗಿದ್ದು, ಮುಂದಿನ ದಿನಗಳಲ್ಲಿ ಸೂಪರ್‌ಬಜಾರ್ ಪ್ರಾರಂಭಿಸುವ ಪ್ರಯತ್ನ ನಡೆದಿದೆ ಎಂದರು.

ಬಿಸಿಸಿ ಡಬ್ಲುೃ ಸ್ಟೋರ್‌ನ ಪ್ರಧಾನ ವ್ಯವಸ್ಥಾಪಕ, ಸಹಕಾರ ಸಂಘಗಳ ಸಹಾಯಕ ಅಧಿಕಾರಿ ಜಿ.ಎಂ.ವೀರಭದ್ರಯ್ಯ ಮಾತನಾಡಿ, ಸಂಘದ ಸರ್ವ ಸದಸ್ಯರು ಜನತಾ ಬಜಾರ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ಉಪಾಧ್ಯಕ್ಷೆ ನಸೀಮಾ ಬೇಗಂ, ನಿದೇರ್ಶಕರಾದ ಎಂ.ಕಾತ್ಯಾಯಿನಿ ಮರಿದೇವಯ್ಯ, ವೆಂಕಟೇಶ್ ಹೆಗಡೆ, ಎಚ್.ಎಂ. ಮಹೇಂದ್ರ ಕುಮಾರ್, ಕೆ.ವೆಂಕಟಸ್ವಾಮಿ, ಎಸ್.ಮುಜಾಹಿದ್ ಅಲಿ, ಪಿ.ಕವಿತಾ, ಬಿ.ದಾನರೆಡ್ಡಿ, ಸಿ.ಗುರು ಪ್ರಸಾದ್ ರೆಡ್ಡಿ, ವಿ.ಪ್ರದೀಪ್ ರೆಡ್ಡಿ, ಕೆ.ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್, ಕೆ.ಎಂ.ಕೇದಾರ್‌ನಾಥ್, ಕೆ.ವೇಮಣ್ಣ, ಕೋರಿ ಚನ್ನಬಸಪ್ಪ (ಕೆಎಂಪಿ ಪುಟ್ಟುಸ್ವಾಮಿ), ಎಂ.ನರೇಶ್ ಕುಮಾರ್, ಪಲ್ಲೇದಮೈತ್ರಿ, ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಕೇಸರಿಮಠ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net