ಬಳ್ಳಾರಿ : ಜೀನ್ಸ್ ಉದ್ಯಮದಿಂದ ದೇಶದಲ್ಲಿ ಖ್ಯಾತಿ ಪಡೆದಿದ್ದ ಜಿಲ್ಲೆಯು ಕೆಲ ವರ್ಷಗಳಿಂದ ಚೇತರಿಕೆ ಕಾಣದೆ ಹಲವು ಘಟಕಗಳು ಬಂದ್ ಒಂದಡೆಯಾದರೆ, ಮತ್ತೊಂದಡೆ ಅಳಿದ ಉಳಿದ ಘಟಕಗಳ ಆವರಣದಲ್ಲಿ ಸಿಬ್ಬಂದಿ ತರಕಾರಿ ಬೆಳೆಯಲು ಮುಂದಾಗಿದ್ದಾರೆ.
ನಗರದ ಹೊರವಲಯದ ಮುಂಡ್ರಿಗಿ ಪ್ರದೇಶದಲ್ಲಿ ಕೊರೊನಾ ಮುನ್ನ 83 ಜಿನ್ಸ್ ವಾಷಿಂಗ್ ಘಟಕಗಳು ಚಾಲ್ತಿಯಲ್ಲಿದ್ದವು. ನಂತರ ಕೊರೊನಾ ಹೊಡೆತಕ್ಕೆ ವಿವಿಧ ಸಮಸ್ಯೆಗಳಿಂದ ಏಕಾಏಕಿ 43 ಘಟಕಗಳು ಬಂದ್‌ಯಾಗಿವೆ. ಸದ್ಯ 33 ವಾಷಿಂಗ್ ಘಟಕಗಳಿದ್ದು ಸಂಕ್ರಾಂತಿ ಸೀಜನ್ ನಂತರ ಇನ್ನೂ ಹತ್ತು ಘಟಕಗಳು ಬಂದ್‌ಯಾಗಲಿವೆ.
ಮೂಲ ಸೌಕರ್ಯಗಳ ಕೊರತೆ : ಜೀನ್ಸ್ ವಾಷಿಂಗ್ ಘಟಕಗಳಿಗೆ ಅಪಾರ ಪ್ರಮಾಣದ ನೀರಿನ ಅವಶ್ಯವಿದ್ದು ಇದೊಂದು ಉದ್ಯಮದಾರರಿಗೆ ದೊಡ್ಡ ಸವಾಲ್‌ಯಾಗಿ ಪರಿಣಮಿಸಿದೆ. ಬೊರವೆಲ್ ಮೂಲಕ ಹತ್ತು ಕಿ.ಮೀ. ದೂರದಿಂದ ಪೈಪ್‌ಲೈನ್ ಅಳವಡಿಸಿಕೊಂಡು ನೀರು ಸರಬಾರಜು ಮಾಡಿಕೊಳ್ಳುತ್ತಿದ್ದು ಮೋಟಾರ್ ರಿಪೇರಿ ಹಾಗೂ ಬೊರೆವೆಲ್ ಕೊರಸಿದ ಜಮೀನು ಮಾಲೀಕರಿಗೆ ಲಕ್ಷಾಂತರ ರೂ. ಹಣ ವ್ಯಯಿಸಬೇಕು. ಅಲ್ಲದೆ, ವಿದ್ಯುತ್ ಸಮಸ್ಯೆ ಹಾಗೂ ಅಳವಡಿಸಿರುವ ಕೇಬಲ್‌ಗಳ ಗುಣಮಟ್ಟದ ಕೊರತೆಯಿಂದ ಗಾಳಿ, ಮಳೆಗೆ ಹರಿದು ಬೀಳುತ್ತಿವೆ. ಇದರಿಂದ ಮಷಿನ್‌ಗಳ ಚಾಲ್ತಿಯಲ್ಲಿ ವಿದ್ಯುತ್ ಸ್ಥಗಿತದಿಂದ ಕೆಮಿಕಲ್ ರಿಯಾಕ್ಷನ್‌ನಿಂದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಹಾಳಗುತ್ತಿವೆ. ಅಲ್ಲದೆ, ಇತ್ತೀಚೆಗೆ ಜೆಸ್ಕಾಂ ಇಲಾಖೆಯು ಘಟಕಗಳಿಗೆ ಮುಂಗಡವಾಗಿ ಹೆಚ್ಚುವಾರಿ ಭದ್ರತಾ ಠೇವಣಿ(ಎಎಸ್‌ಡಿ)ಇಡುವಂತೆ ನಿತ್ಯ ಒತ್ತಡ ಹೇರುತ್ತಿದೆ. ಈಚೆಗೆ ಘಟಕಗಳಿಗೆ ಸೂಕ್ತ ಭದ್ರತೆ ಕೊರತೆಯಿಂದ ಆವರಣದ ಹೊರಗಡೆ ಹಾಕಿರುವ ಸಾವಿರಾರು ಮೌಲ್ಯದ ಜೀನ್ಸ್ ಪ್ಯಾಂಟ್‌ಗಳು ಕಳುವಯಾದ ಘಟನೆಗಳು ನಡೆದಿವೆ. ಕೆಲ ವರ್ಷಗಳ ಹಿಂದೆ ದಿನದ 24 ತಾಸು ನಡೆಯುವ ಜೀನ್ಸ್ ಘಟಕಗಳು ಸದ್ಯ ಮೂರರಿಂದ ನಾಲ್ಕು ತಾಸು ಕೆಲಸವಿಲ್ಲ. ಸಿಬ್ಬಂದಿಗೆ ಕೆಲಸ ಇಲ್ಲದೆ ಇರುವುದರಿಂದ ಜೀನ್ಸ್ ಘಟಕದ ಆವರಣದಲ್ಲಿ ತರಕಾರಿ ಬೆಳೆಸುತ್ತಿದ್ದಾರೆ. ಸದ್ಯ ಬಳ್ಳಾರಿ ಜೀನ್ಸ್ ಉದ್ಯಮವು ಐಸಿಯುನ ವೆಂಟಿಲೇಟರ್‌ನಲ್ಲಿ ನಡೆಯುತ್ತಿದೆ ಎಂದು ವಾಷಿಂಗ್ ಘಟಕದ ಉದ್ಯಮಿ ನಾಗರಾಜ ತಿಳಿಸಿದರು.
ಜೀನ್ಸ್ ಅಪೆರಲ್ ಪಾರ್ಕ್ ವಿಳಂಬ : ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈವರೆಗೂ ಜಿಲ್ಲೆಯಲ್ಲಿ ಸ್ಥಳ ಗುರುತಿಸಿಲ್ಲ. ಸ್ವತಃ ರಾಹುಲ್ ಗಾಂಧಿ ಜೋಡೋ ಯಾತ್ರೆ ವೇಳೆ ಜೀನ್ಸ್ ಘಟಕಕ್ಕೆ ಭೇಟಿ ನೀಡಿದ್ದ ಘಟಕವು ಚೇತರಿಕೆ ಕಾಣದೆ ಸಾಲದ ಸುಳಿಗೆ ಸಿಲುಕಿ ಬಂದ್‌ಯಾಗಿದೆ ಎಂದು ಉದ್ಯಮದಾರು ಹೇಳಿದರು. ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುತ್ತಿರುವ ಜೀನ್ಸ್ ಘಟಕವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇಲ್ಲಿನ ಕೌಲಬಜಾರ್, ಹುಸೇನ್‌ನಗರ, ಬಾಪುಜಿ ನಗರ, ಬಳ್ಳಾರಪ್ಪ ಕಾಲನಿ ಸೇರಿದಂತೆ ವಿವಿಧಡೆ ಮನೆಗಳಲ್ಲಿ ಸದಾ ಕೇಳುತ್ತಿದ್ದ್ದ ಮಿಷನ್‌ಗಳ ಸದ್ದು ಕಡಿಮೆಯಾಗುತ್ತಿದ್ದು ಸರ್ಕಾರ ಜೀನ್ಸ್ ಉದ್ಯಮವನ್ನು ಮೇಲೆ ಎತ್ತುವ ಕೆಲಸ ಮಾಡಲಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಕೋಟ್... ಜೆಸ್ಕಾಂ ಇಲಾಖೆಯು ಜೀನ್ಸ್ ಘಟಕಗಳ ವಿದ್ಯುತ್ ಬಾಕಿಯನ್ನು ಇಎಂಐ ರೀತಿಯಲ್ಲಿ ಪಾವತಿಸಿಕೊಳ್ಳಬೇಕು. ನಗರದಲ್ಲಿ ನೀರಿನ ಪ್ರದೇಶದಲ್ಲಿ ಜೀನ್ಸ್ ಘಟಕಗಳು ತೆರೆಯಲು ಸರ್ಕಾರ ಮುಂದಾಗಬೇಕು.
- ವೇಣುಗೋಪಾಲ್, ಅಧ್ಯಕ್ಷ, ಜೀನ್ಸ್ ವಾಷಿಂಗ್ ಘಟಕ, ಬಳ್ಳಾರಿ.