ಬಳ್ಳಾರಿಯ : ಎಸ್ಪಿ ಕಚೇರಿಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸೈಬರ್ ಅಪರಾಧ, ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾಕ್ಕೆ ವಲಯ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ ಚಾಲನೆ ನೀಡಿದರು. ಎಸ್ಪಿ ಡಾ.ವಿ.ಜೆ. ಶೋಭಾರಾಣಿ, ನ್ಯಾ. ರಾಜೇಶ್ ಎಸ್. ಹೊಸಮನಿ. ಡಿಎಸ್ಪಿಗಳಾದ ವೆಂಕಟೇಶ, ತಿಪ್ಪೇಸ್ವಾಮಿ, ಸಿಪಿಐ ಅಯ್ಯನಗೌಡ ಪಾಟೀಲ ಇದ್ದರು.