ಬಳ್ಳಾರಿಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ: ಖುದ್ದು ಫೀಲ್ಡ್‌ಗಿಳಿದ ಡಿಸಿ ಪವನಕುಮಾರ್ ಮಾಲಪಾಟಿ

18042021 Bellary ruls not apply
Published on

ಬಳ್ಳಾರಿ: ನಗರದ ಬೆಂಗಳೂರು ರಸ್ತೆ ಸೇರಿ ಸಂಪೂರ್ಣ ಮಾರ್ಕೆಟ್ ಸುತ್ತಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಶನಿವಾರ ಸಂಜೆ ಮಾಸ್ಕ್ ಧರಿಸದವರನ್ನು ತರಾಟೆಗೆ ತೆಗೆದುಕೊಂಡು ದಂಡವನ್ನೂ ವಿಧಿಸಿದರು. ಕೋವಿಡ್ ನಿಯಯ ಉಲ್ಲಂಘಿಸಿದ ಎರಡು 2 ಅಂಗಡಿಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು.

ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸರ್ ಬಳಕೆ ಅನಿವಾರ್ಯವಾಗಿದೆ. ಆದರೂ ಜನರು ಇದರ ಗಂಭೀರತೆ ಅರಿತುಕೊಳ್ಳುತ್ತಿಲ್ಲ ಎಂದು ಡಿಸಿ ಬೇಸರ ವ್ಯಕ್ತಪಡಿಸಿದರು.

ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸಲು ಅಧಿಕಾರಿಗಳ ತಂಡ ರಚಿಸಿದ್ದು, ನಗರದ ರಾಯಲ್ ಸರ್ಕಲ್, ಎಸ್.ಎನ್.ಪೇಟೆ, ಬೆಂಗಳೂರು ರಸ್ತೆ ಸೇರಿ ಒಟ್ಟು 20 ಸ್ಥಳಗಳಲ್ಲಿ ತಲಾ ಒಬ್ಬ ಅಧಿಕಾರಿ ಹಾಗೂ ಪೇದೆಯನ್ನು ನಿಯೋಜಿಸಲಾಗಿದೆ. ಆ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿದೆ ಓಡಾಡುತ್ತಿದ್ದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 100 ರೂ.ದಂಡ ವಿಧಿಸುವಂತೆ ಸೂಚಿಸಲಾಗಿದೆ ಎಂದರು. ತಹಸೀಲ್ದಾರ್ ರೆಹಮಾನ್ ಪಾಷಾ, ಪಾಲಿಕೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net