ಹೆತ್ತ ಮಕ್ಕಳನ್ನೇ ಕೆರೆಗೆಸೆದ ಪಾಲಕರು: ಬಂಧಿತ ದಂಪತಿ ಹೇಳಿಕೆಗೆ ತೀವ್ರ ಆಕ್ರೋಶ

IMG-20200813-WA0009
Published on

ಕಾನಹೊಸಹಳ್ಳಿ(ಬಳ್ಳಾರಿ): ಮಾಡಿದ ಸಾಲ ತೀರಿಸಲಾಗದೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧರಿಸಿದ್ದ ದಂಪತಿ, ಇಬ್ಬರು ಮಕ್ಕಳನ್ನು ಕೆರೆಗೆ ಎಸೆದು ಹತ್ಯೆ ಮಾಡಿದ್ದಾರೆ.

ಚಂದ್ರಶೇಖರಪುರ ಗ್ರಾಮದ ಚಿರಂಜೀವಿ ಮತ್ತು ನಂದಿನಿ ಆತ್ಮಹತ್ಯೆಗೆ ಮುಂದಾಗಿದ್ದು, ಮಗಳು ಖುಷಿ(3) ಮತ್ತು ಮಗ ಚಿರು(1)ವನ್ನು ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಗೆ ಎಸೆದಿದ್ದಾರೆ. ನಂತರ ದಂಪತಿ ಕೆರೆಗೆ ಹಾರಲು ಹಿಂದೇಟು ಹಾಕಿದ್ದರಿಂದ ಮಕ್ಕಳಷ್ಟೇ ಬಲಿಯಾಗಿದ್ದಾರೆ. ಮಲ್ಲನಾಯಕನ ಹಳ್ಳಿಯ ಚಿರಂಜೀವಿ ಹಾಗೂ ಸಿಎಸ್ ಪುರದ ನಂದಿನಿ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು.

ನಂದಿನಿಯ ತಾಯಿ ಹನುಮಕ್ಕ ನೀಡಿದ ದೂರಿನ ಮೇರೆಗೆ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಮೃತ ದೇಹಗಳ ಪತ್ತೆ ಕಾರ್ಯ ನಡೆಸಿದ್ದು, ಒಂದು ಮಗುವಿನ ದೇಹ ಸಿಕ್ಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net