ಮುಂಗಡ ರೂಮ್ ಬುಕಿಂಗ್ ದಂಪತಿಗೆ ವಂಚನೆ

Published on

ಬಳ್ಳಾರಿ ; ಇಲ್ಲಿನ ವೃದ್ಧ ದಂಪತಿಯು ತಿರುಪತಿಯಲ್ಲಿ ಮುಂಗಡ ಕೊಠಡಿ ಕಾಯ್ದಿರಿಸಲು ಆನ್‌ಲೈನ್‌ನಲ್ಲಿ ಯತ್ನಿಸಿ, 20 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜೂ.25ರಂದು ತಿರುಪತಿಯಲ್ಲಿ ಉಳಿದುಕೊಳ್ಳಲು ಇಂಟರನೆಟ್‌ನಲ್ಲಿ ಲಾಡ್ಜ್‌ಗಾಗಿ ಹುಡುಕಿದ್ದ ದಂಪತಿ, ಅಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಕೊಠಡಿ ಬಗ್ಗೆ ವಿಚಾರಿಸಿದ್ದಾರೆ. ಅವರು ಹೇಳಿದಂತೆ ಮೊದಲಿಗೆ 1,100 ರೂ. ಪೋನ್‌ಪೇ ಮೂಲಕ ಪಾವತಿಸಿದ್ದಾರೆ. ಮರುದಿನ ಕರೆ ಮಾಡಿದ್ದ ವಂಚಕರು ಜಿಎಸ್‌ಟಿ ಹಣವಾಗಿ 1,160 ರೂ. ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿಯೂ ಹಣ ವಾಪಸ್ ಕೇಳಿದ್ದಾರೆ, ಹಣ ಹಿಂದುರುಗಿಸಬೇಕಿದ್ದರೆ ಒಂದಷ್ಟು ಹಣ ಹಾಕಲು ವಂಚಕರು ಹೇಳಿದ್ದಾರೆ. ಹೀಗೆ 16 ದಿನಗಳಲ್ಲಿ ಹಂತ ಹಂತವಾಗಿ ಒಟ್ಟು 20.69 ಲಕ್ಷ ರೂ. ವಂಚಕರ ಖಾತೆಗೆ ಜಮೆ ಮಾಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net