

ಬಳ್ಳಾರಿ: ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಜ.10 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಇಬ್ಬರು ಹಾಗೂ ಬಿಜೆಪಿಯಿಂದ ಒಬ್ಬರು ಮತ್ತು ಪಕ್ಷೇತರ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ಪಾಲಿಕೆಯ 22ನೇ ಅವಧಿಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮಹಾನಗರ ಪಾಲಿಕೆ ಸುತ್ತಮುತ್ತ 500 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಚುನಾವಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಚುನಾವಣೆ ನಡೆಸಲು ಸಿಆರ್‌ಪಿಸಿ ಕಾಯ್ದೆ 1973 ಕಲಂ 144 ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆದೇಶ ಹೊರಡಿಸಿದ್ದಾರೆ.
ನಾಲ್ವರಿಂದ ನಾಮಪತ್ರ
31ನೇ ವಾರ್ಡ್‌ನ ಸದಸ್ಯೆ ಶ್ವೇತಾ ಬಿ., 38ನೇ ವಾರ್ಡಿನ ವಿ.ಕುಬೇರ ಕಾಂಗ್ರೆಸ್‌ನಿಂದ ಈಗಾಗಲೇ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ 35ನೇ ವಾರ್ಡ್‌ನ ಪಕ್ಷೇತರ ಸದಸ್ಯ ಮಿಂಚು ಶ್ರೀನಿವಾಸ್, ಒಂದನೇ ವಾರ್ಡ್ ಬಿಜೆಪಿ ಸದಸ್ಯ ಗುಡಗಂಟಿ ಹನುಮಂತಪ್ಪ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದಿಂದ ಮೇಯರ್ ಆಗುವುದಾದರೆ ಕುಬೇರ ಹಾಗೂ ಶ್ವೇತಾಗೆ ಅವಕಾಶವಿದ್ದು, ಅತೃಪ್ತರು ಶ್ವೇತಾ ಅವರನ್ನು ಮೇಯರ್ ಮಾಡಲು ಒಪ್ಪಿಗೆ ಸೂಚಿಸುತ್ತಿಲ್ಲ. ಆದರೆ ಪಕ್ಷದ ನಿರ್ಧಾರ ಅಂತಿಮವಾಗಿದ್ದು, ಕೊನೇ ಕ್ಷಣದಲ್ಲಿ ಮತ್ತೆ ಯಾವ ರೀತಿ ಬದಲಾವಣೆಗಳಾಗುತ್ತವೆಯೋ ಕಾದು ನೋಡಬೇಕಿದೆ.
ವಿಪ್ ಅಸ್ತ್ರಕ್ಕೆ ಹೆದರುತ್ತಾರಾ ಅತೃಪ್ತರು
ಪಾಲಿಕೆಯಲ್ಲಿ ಒಟ್ಟು 39 ಸದಸ್ಯರ ಬಲಾಬಲವಿದ್ದು, ಅದರಲ್ಲಿ ಕಾಂಗ್ರೆಸ್ 21, ಬಿಜೆಪಿ 13 ಮತ್ತು ಪಕ್ಷೇತರರು ಐವರು ಸದಸ್ಯರಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನ 8 ಹಾಗೂ ಮೂವರು ಪಕ್ಷೇತರರು ಈ ಹಿಂದೆ ಅಜ್ಞಾತ ಸ್ಥಳಕ್ಕೆ ಧಾವಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಂತ್ರರೂಪಿಸಿದ್ದು, ಕಾಂಗ್ರೆಸ್‌ನ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಲು ನಿರ್ಧರಿಸಲಾಗಿದೆ. ವಿಪ್ ಅಸ್ತ್ರ ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ಬಳಗದ ಕಾಂಗ್ರೆಸ್ ಸದಸ್ಯರಿಗೆ ಮುಳುವಾಗಬಹುದು ಎನ್ನಲಾಗುತ್ತಿದೆ.
ವಿಜಯೋತ್ಸವಕ್ಕೆ ಬ್ರೇಕ್
ವಿಜಯೋತ್ಸವಗಳನ್ನು ಆಚರಿಸುವುದು ಹಾಗೂ ಭೋಜನಕೂಟ ಏರ್ಪಡಿಸುವುದು. 5ಕ್ಕಿಂತ ಹೆಚ್ಚು ಜನರು ಗುಂಪು ಕೂಡಿ ತಿರುಗಾಡುವುದು ಬಹಿರಂಗವಾಗಿ ಘೋಷಣೆ ಕೂಗುವುದು, ಅಸಭ್ಯತೆ ರೀತಿಯಲ್ಲಿ ವರ್ತಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ವುದಕ್ಕೆ ನಿಷೇಧಿಸಲಾಗಿದೆ. ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ಪದಾರ್ಥದ ತಯಾರಿ ಪ್ರದರ್ಶನ ಅಥವಾ ಪ್ರಸಾರ ಮಾಡುವುದು ನಿಷೇಧಿಸಲಾಗಿ
ಇಂಕ್(ಮಸಿ), ನೀರು, ಬೆಂಕಿಪೊಟ್ಟಣ, ಲೈಟರ್ ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು. ಶಸ್ತ್ರ, ಬಡಿಗೆ, ಬರ್ಚಿ, ಗದೆ, ಬಂದೂಕು, ಚಾಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತುಗಳನ್ನು ಪಾಲಿಕೆ ಸುತ್ತಮುತ್ತ ತೆಗೆದುಕೊಂಡು ಬರುವುದಕ್ಕೆ ನಿಷೇಧಿಸಲಾಗಿದೆ. ಸ್ಫೋಟಕ ವಸ್ತು ಒಯ್ಯುವುದು, ಪಟಾಕಿ ಸಿಡಿಸುವುದು. ಕಲ್ಲು ಎಸೆಯುವ, ಕಾರು, ಬೈಕ್ ವಾಹನಗಳಲ್ಲಿ ರ‌್ಯಾಲಿ ಆಯೋಜಿಸುವುದು ಸಹ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.