

ಬಳ್ಳಾರಿ: ಕರೊನಾಂತಕ ನಡುವೆಯೂ ಮಹಾನಗರ ಪಾಲಿಕೆ ಚುನಾವಣೆಗೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಆದರೆ, ಕರೊನಾ ಸೋಂಕಿನ ಭಯದಿಂದ ಈ ಬಾರಿ ಹೆಚ್ಚಾಗಿ ಜನರು ಮತಗಟ್ಟೆ ಕೇಂದ್ರಗಳತ್ತ ಆಗಮಿಸಿದ ಕಾರಣ ಮತದಾನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 39 ವಾರ್ಡ್‌ಗಳಲ್ಲಿ 338 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು.
ಮತದಾನ ಪ್ರಕ್ರಿಯೆಯಲ್ಲಿ ಕೋವಿಡ್ ಕಠಿಣ ನಿಯಮಗಳನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದರೂ ಹಲವೆಡೆ ಜನರು ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಮತದಾನಕ್ಕೆ ಮುಂದಾಗಿದ್ದು ಕಂಡು ಬಂತು. ಬೆಳಗ್ಗೆ ಉತ್ಸುಕತೆಯಿಂದಲೇ ಮತದಾನ ಕೇಂದ್ರದತ್ತ ಆಗಮಿಸಿದ ಮತದಾರರು, ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಲೇ ಕಡಿಮೆ ಪ್ರಮಾಣದಲ್ಲಿ ಬರತೊಡಗಿದರು.
ಸವಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ, ವಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ, ಜೆ.ಶಾಂತಾ, ಎಂಎಲ್‌ಸಿಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಕಾಂಗ್ರೆಸ್ ಮುಖಂಡರಾದ ಆಂಜನೇಯಲು, ಮೊಹಮ್ಮದ ರಫೀಕ ಸೇರಿ ಇತರೆ ಮುಖಂಡರು ಮತದಾರರೊಂದಿಗೆ ಮತದಾನ ವಾಡಿದರು.
ಅಧಿಕಾರ ಉಳಿಸಿಕೊಳ್ಳಬೇಕೆಂಬ ಕಾಂಗ್ರೆಸ್‌ನ ಹಠ, ಚುಕ್ಕಾಣಿ ದಕ್ಕಿಸಿಕೊಳ್ಳಬೇಕೆಂಬ ಬಿಜೆಪಿಯ ಕಸರತ್ತಿನ ನಡುವೆ ಜಿದ್ದಾಜಿದ್ದಿನಿಂದ ಕೂಡಿದ್ದ ಕಣದಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಯಾರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆಗಳಾಗಿ ಪಾಲಿಕೆ ಪ್ರವೇಶಿಸಲಿದ್ದಾರೆ. ಜತೆಗೆ ಪಾಲಿಕೆ ಯಾವ ಪಕ್ಷದ ವಶವಾಗಲಿದೆ ಎಂಬುದನ್ನು ನೋಡಲು ಏ.30ರ ತನಕ ಕಾಯಬೇಕಿದೆ.