ಬಳ್ಳಾರಿ : ಸಿರಗುಪ್ಪದ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಸಂಗ್ರಹಿಸಿಟ್ಟಿದ್ದ ಜೋಳವು ಮಳೆದ ಸುರಿದ ಪರಿಣಾಮ ಮೊಳಕೆಯೊಡೆದು ಹಾಳಾಗಿವೆ.
ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಬೆಳೆದ ಜೋಳವನ್ನು ಕಳೆದ ತಿಂಗಳಿಂದ ಖರೀದಿ ಕೇಂದ್ರದಲ್ಲಿ ರೈತರು ಮಾರಾಟ ಮಾಡುತ್ತಿದ್ದು ಜೋಳವನ್ನು ಆವರಣದಲ್ಲಿ ಸಂಗ್ರಹಿಸಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೂರರು ಕಿಂಟ್ವಾಲ್ ಒಂದೇ ಸ್ಥಳದಲ್ಲಿ ಸಂಗ್ರಹಿಸಿ ಇಟ್ಟದ್ದರಿಂದ ಬಿಳಿ ಜೋಳವು ಮೊಳಕೆಯೊಡೆದು ಹಾಳಾಗಿವೆ. ಇದರಿಂದ ಮಳೆ ಆರಂಭವಾಗುವ ಮುನ್ನವೇ ಸೂಕ್ತ ರೀತಿಯಲ್ಲಿ ಬೇರೆಡೆ ಸ್ಥಳಾಂತರಿಸಿ ಸಂರಕ್ಷಿಸಬೇಕಾದ ಅಧಿಕಾರಿಗಳು ಮರೆತಿದ್ದಾರೆ ಎಂದು ರೈತರು ಅಕ್ರೋಶ ಹೊರಹಾಕಿದರು.