ವಿವಾದಗಳಿಗೆ ಮೌನವೇ ನನ್ನ ಉತ್ತರ: ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಹೇಳಿಕೆ

ujjini photos (14)
Published on

ಬಳ್ಳಾರಿ: ಪೀಠಾಧಿಪತಿ ವಿವಾದಕ್ಕೆ ಸಂಬಂಧಿಸಿದಂತೆ ಮೌನವೇ ನನ್ನ ಉತ್ತರ ಎಂದು ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವಾತ್ಪದರು ಹೇಳಿದರು. ದೀಕ್ಷೆ ನೀಡಿದ ಗುರುಗಳ ಬಗ್ಗೆ ನನಗೆ ಗೌರವ ಇದೆ. ಪೀಠಾಧಿಪತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದು ಹೊತ್ತಿನ ಪ್ರಸಾದ ಸ್ವೀಕರಿಸುವುದರ ಜತೆಗೆ ಮೌನವಾಗಿರುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇನೆ. ಭಕ್ತರು ಹಾಗೂ ಸಮಾಜವೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಆಹ್ವಾನ ಇದ್ದಾಗ ಮಾತ್ರ ಒಂದು ಪೀಠದ ಗುರುಗಳು ಇನ್ನೊಂದು ಪೀಠಕ್ಕೆ ಭೇಟಿ ನೀಡುತ್ತಾರೆ. ಪೀಠಾಧಿಪತಿ ವಿವಾದದಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಇಲ್ಲ. ಪೀಠಕ್ಕೆ ಬರುವವರೆಲ್ಲ ಭಕ್ತರೇ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net