ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹ: ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಸಾಥ್

17012021 Bellary fund raising-MLA G Somashekhar Reddy
Published on

ಬಳ್ಳಾರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಗರದ ತಾಳೂರು ರಸ್ತೆಯ ರೇಣುಕನಗರ, ಶ್ರೀನಗರದಲ್ಲಿ ಭಾನುವಾರ ಶ್ರೀರಾಮ ಭಕ್ತರೊಂದಿಗೆ ಶಾಸಕ ಜಿ.ಸೋಮಶೇಖರ ರೆಡ್ಡಿ ನಿಧಿ ಸಂಗ್ರಹಿಸಿದರು.

ಮನೆ ಮನೆಗೆ ತೆರಳಿದ ಶಾಸಕರನ್ನು ಕಂಡ ನಿವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದರು. ಶಾಸಕರು ಮನೆ ಮಂದಿಯ ಉಭಯಕುಶಲೋಪರಿ ವಿಚಾರಿಸಿದರು. ಕೆಲವರು ಮೂಲಸೌಕರ್ಯ ಕೊರತೆ ಕುರಿತು ಶಾಸಕರ ಗಮನಕ್ಕೆ ತಂದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶ್ರೀನಿವಾಸ್ ಮೋತ್ಕರ್, ಬಿಜೆಪಿ ಮುಖಂಡ ಹನುಮಂತ ಗುಡುಗುಂಟೆ, ಎಸ್.ಮಲ್ಲನಗೌಡ, ಗಾದಿಲಿಂಗನಗೌಡ, ಸುಧಾಕರ ರೆಡ್ಡಿ, ಶರಣಪ್ಪ, ಗುರುಮೂರ್ತಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net